ಮೂಡುಬಿದರೆ: ಹೊಸ್ಮಾರು ಪೆರ್ನೊಟ್ಟು ಏರು ಹಾದಿಯಲ್ಲಿ ಶನಿವಾರ ನೆಲ್ಲಿಕಾರಿನಿಂದ ಮಡಂತ್ಯಾರಿಗೆ ತೆರಳುತ್ತಿದ್ದ ಮಾರುತಿ 800 ಗೆ ಎದುರಾಗಿ ಬರುತ್ತಿದ್ದ ಇನೋವಾ ಡಿಕ್ಕಿ ಹೊಡೆದ ಪರಿಣಾಮ, ಒಂದು ಮಗು ಸೇರಿ 6 ಮಂದಿ ಗಾಯಗೊಂಡಿದ್ದಾರೆ. 800 ಕಾರಿನ ಚಾಲಕ ಶೈಲೇಶ್, ಭವ್ಯ, ಆಧ್ಯಾ, ಕಾಂಚನಮಾಲ, ನಿರ್ಮಳಾ ಸೇರಿ ಆರು ಮಂದಿ ಗಾಯಗೊಂಡವರು. ಗಂಭೀರವಾಗಿ ಗಾಯಗೊಂಡ 6 ಜನರನ್ನು ಕಾರ್ಕಳ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಳಿಕ ಮಂಗಳೂರು ಕೆಎಂಸಿ ದಾಖಲು ಮಾಡಲಾಗಿದೆ. ವರನ ಕಡೆಯವರು ಮಡಂತ್ಯಾರಿನ ವಧುವಿನ ಊರಲ್ಲಿ ಇದ್ದ ಔತಣಕೊಟಕ್ಕೆ ತೆರಳುತ್ತಿದ್ದರು.
ಇನ್ನೋವ ಚಾಲಕ ರಸ್ತೆ ಪಕ್ಕದಲ್ಲಿದ್ದ ಸೀಯಾಳ ಅಂಗಡಿಯ ನೋಡುತ್ತಾ ಬರುತ್ತಿದ್ದು, ಈ ವೇಳೆ ಎದುರಿಗೆ ಬರುತ್ತಿದ್ದ ಮಾರುತಿ 800 ಕಾರನ್ನು ಗಮನಿಸದೆ ಇದ್ದ ಪರಿಣಾಮ ಡಿಕ್ಕಿ ಸಂಭವಿಸಿದೆ. ಮೂಡುಬಿದರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ,ತನಿಖೆ ನಡೆಸುತ್ತಿದ್ದಾರೆ.