ಮೂಡುಬಿದರೆ: ಕಾಲೇಜು ವಿದ್ಯಾ ನಿಯ ಪರ್ಸ್  ಅಪಹರಿಸಿದ ಯುವಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಶುಕ್ರವಾರ ಸಂಜೆ ಮೂಡಬಿದರೆ ಪೇ ಟೆಯಲ್ಲಿ ನಡೆದಿದೆ.

mbd_april25_6
ಶುಕ್ರವಾರ ಸಂಜೆ ಹನುಮಂತ ದೇವಸ್ಥಾನದ ಬಳಿ ಮುಖ್ಯ ರಸ್ತೆ ಪಕ್ಕದಲ್ಲಿ ಮೂವರು ವಿದ್ಯಾರ್ಥಿನಿಯರು ನಡೆದುಕೊಂಡು ಬರುತ್ತಿದ್ದಾಗ ಹಿಂಬದಿಯಿಂದ ಬಂದ ಯುವಕ ಯುವತಿಯೊಬ್ಬಳ ಪರ್ಸನ್ನು ಎಳೆದುಕೊಂಡು ಬಸ್ನಿಲ್ದಾಣದತ್ತ ಓಡಿ ಬಂದ. ಯುವತಿ ಬೊಬ್ಬೆ ಹೊಡೆದಾಗ ಯುವಕ ಪರ್ಸನ್ನು ರಸ್ತೆಯಲ್ಲಿ ಎಸೆದನೆನ್ನಲಾಗಿದೆ. ಸಾರ್ವಜನಿಕರು ಬೆನ್ನತ್ತಿ ಸಾಯಿಬಾಬ ಮೆಡಿಕಲ್ ಬಳಿ ಆತನನ್ನು ಹಿಡಿದು ತಕ್ಕ ಶಾಸ್ತಿ ಮಾಡಿ ಪೊಲೀಸರಿಗೊಪ್ಪಿದಿದ್ದಾರೆ. ಆರೋಪಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಆತ ಬಂಟ್ವಾಳ ರಾಯಿ ಎಂಬಲ್ಲಿನ ರವಿ ಎಂಬವರ ಮಗ ತಿಮ್ಮಪ್ಪ(24) ಎಂದು ತಿಳಿದುಬಂದಿದ್ದು,ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿದ್ದಾನೆ.

By suddi9

Leave a Reply

Your email address will not be published. Required fields are marked *