ಸುದ್ದಿ9 ಬಂಟ್ವಾಳ; ನಾಮಪತ್ರ ಸಲ್ಲಿಸುವ ಮೊದಲೇ ಕ್ಷೇತ್ರದ್ಯಾಂತ ಎರಡು ಸುತ್ತಿನ ಪ್ರವಾಸ ಮುಗಿಸಿದ್ದೇನೆ.ಇದೀಗ ನಾಮಪತ್ರ ಸಲ್ಲಿಸಿದ ಬಳಿಕ ಮೂರನೇ ಸುತ್ತಿನ ಪ್ರವಾಸ ಮಾಡುತ್ತಿದ್ದೇನೆ. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಕಾರ್ಯಕರ್ತರನ್ನು ಬೇಟಿಯಾಗಿ ಬಿಜೆಪಿಯ ಸಾಧನೆ, ಕಾಂಗ್ರೇಸ್ನ ಜನವಿರೋಧಿ ನೀತಿಯ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡುಲಾಗುತ್ತಿದೆ. ಮುಂದೆ ಕಾರ್ಯಕರ್ತರು ಮೂರು ಹಂತಗಳಲ್ಲಿ ಮತಪ್ರಚಾರವನ್ನು ಮಾಡಲಿದ್ದು ಮತದಾರರನ್ನು ಬೇಟಿಯಾಗುವ ಮೂಲಕ ಮನೆ ಮನೆನೆಗೆ ಬಿಜೆಪಿ ಅಭಿಯಾನ ನಡೆಯಲಿದೆ ಎಂದು ಬಿಜೆಪಿ ಅಭ್ಯಥರ್ಿ ನಳಿನ್ ಕುಮಾರ್ ಕಟೀಲು ಹೇಳಿದ ಅವರ ಗುರುವಾರ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನರೇಂದ್ರ ಮೋದಿ ಜಿಲ್ಲಗೆ ಆಗಮಿಸುವ ಮೂಲಕ ಜಿಲ್ಲೆಯಲ್ಲಿ ಈಗಾಗಲೇ ಬಿಜೆಪಿ ಪರ ವಾತಾವರಣ ನಿಮರ್ಾಣವಾಗಿದೆ. ನಾವು ಹೋದಲ್ಲೆಲ್ಲಾ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಕಾರ್ಯಕರ್ತರು ಈ ಹಿಂದಿಗಿಂತಲೂ ಈ ಬಾರಿ ಅತೀ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
60 ವರ್ಷಗಳಲ್ಲಿ ಏನೂ ಮಾಡದ ಕಾಂಗ್ರೆಸ್ ನೇತೃವತ್ವದ ಕೇಂದ್ರ ಸಕರ್ಾರಹಾಗೂ ರಾಜ್ಯ ಸಕರ್ಾರ ಈ ಬಾರಿ ಮತ್ತೆ ಅಂಗೈಯಲ್ಲಿ ಅರಮನೆ ತೋರಿಸುವ ಪ್ರಣಾಲಿಕೆಯನ್ನು ಜನರ ಮುಂದಿಟ್ಟಿದೆ. ಆದರೆ ಇದರಲ್ಲಿ ಯಾವಯದಾದದೂ ಅವರು ಅನುಷ್ಠಾನಕ್ಕೆ ತರುವಂತದಲ್ಲ. ಒಂದು ವೇಳೆ ಅವರು ಇಷ್ಟು ವರ್ಷಗಳಲ್ಲಿ ಮಂಡಿಸಿದ ಪ್ರಣಾಳಿಕೆಯನ್ನು ಅನುಷ್ಟಾನಕ್ಕೆ ತರುತ್ತಿದ್ದರೆ ಇವತ್ತಿಗೂ ದೇಶದಲ್ಲಿ ಬಡತನ, ನಿರುದ್ಯೋಗ, ಅನಕ್ಷರತೆ ಯಾಕೆ ತಾಂಡವವಾಡಬೇಕಿತ್ತು? ಭ್ರಷ್ಟಾಚಾರ, ಅನ್ಯಾಯ, ಆಕ್ರಮಣಗಳು ಇಂದಿಗೂ ಯಾಕೆ ಮಿತಿ ಮೀರಬೇಕಿತ್ತು. ಇದ್ಯಾವುದನ್ನೂ ನಿಯಂತ್ರಿಸಲಾಗದ ಕಾಂಗ್ರೇಸ್ ಈಗ ಸೋಲಿನ ಭೀತಿಯಿಂದ ಬಾಯಿಗೆ ಬಂದ ಹಾಗೆ ೆಮಾತಾಡುತ್ತಿದೆ. ಭಾರತದ ಜನರನ್ನು ಮೂರ್ಖರೆಂದು ಭಾವಿಸಿದ ಈ ಕಾಂಗ್ರೇಸಿಗರನ್ನು ಈ ಬಾರಿ ಜನತೆ ನಂಬಲ್ಲ. ಸರಿಯಾದ ಬುದ್ದಿ ಕಲಿಸಲು ತೀಮರ್ಾನಿಸಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೇಸ್ ಆಳ್ವಿಕೆಯಲ್ಲಿ ಒಂದೇ ವರ್ಷದಲ್ಲಿ ಜನತೆ ನೆಮ್ಮದಿಯನ್ನು ಕಳೆದು ಕೊಂಡಿದೆ. ರಾಜ್ಯದಲ್ಲಿ ಕಾಂಗ್ರೇಸ್ ಸಕರ್ಾರ ಗೂಂಡಾ ಗಿರಿ, ಅತ್ಯಾಚಾರ, ಅನ್ಯಾಯ, ಆಕ್ರಮಣಕೋರರ ರಾಜ್ಯ ಎಂಬುವುದನ್ನು ಸಾಬೀತು ಮಾಡಿದೆ.
ರಾಜ್ಯ ಮತ್ತು ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೊಲೆ, ಗೋ ಕಳ್ಳತನ, ಹಲ್ಲೆ. ಮಹಿಳೆಯರ ಮೇಲಿನ ಕಿರುಕುಳ ನಡೆದರೂ ಯಾಕೆ ತಣಿಖೆ ನಡೆಸಿಲ್ಲ. ಕಾಂಗ್ರೆಸಿಗರ ಬಣ್ಣ ಬಯಲಾಗುತ್ತದೆ. ಯಾಕೆಂದರೆ ಈ ಎಲ್ಲ ಪ್ರಕರಣಗಳಲ್ಲೂ ಕಾಂಗ್ರೆಸ್ ಪ್ರಮುಖರು ಸಾಮೀಲಾಗಿದ್ಧಾರೆ.ಈಗ ಕಾಂಗ್ರೇಸ್ ಸೋಲಿನ ಭೀತಿಯಲ್ಲಿದೆ. ಅದಕ್ಕಾಗಿ ಅಲ್ಲಲ್ಲಿ ಸಾಮರಸ್ಯ ಎಂಬ ಹೆಸರಿನಲ್ಲಿ ಸಮಾವೇಷ ನಡೆಸಿ, ಬಿಜೆಪಿಗರ ಮೇಲೆ ಹಲ್ಲೆ ನಡೆಸಿ ಕೋಮುಭಾವನೆ ಕೆರಳಿಸಿ, ಅಶಾಂತಿಯನ್ನು ನಡೆಸಿ ಮತ ಪಡೆಯುವ ಷಡ್ಯಂತ್ರ ನಡೆಸುತ್ತಿದೆ.
ಈ ಹಿಂದೆ ಉಚಿತ ವಿದ್ಯುತ್ ಕೊಡುತ್ತೇವೆಂದು ಹೇಳಿದ ಈ ಸರಕಾರಕ್ಕೆ ಈಗ ದುಡ್ಡು ಕೊಟ್ಟರೂ ವಿದ್ಯುತ್ ಕೊಡುವ ಯೋಗ್ಯತೆ ಇಲ್ಲ. ಆಧರ್ ಬೇಕು ಎನ್ನುವ ಕಾಂಗ್ರೇಸ್ ಆಧಾರ್ ಹೆಸರಿನಲ್ಲಿ ಕೋಟಿ ಗಟ್ಟಲೆ ಹಣವನ್ನು ಲೂಟಿ ಮಾಡಿದೆ ವಿನಹ ಜನರಿಗೆ ಏನೂ ಪ್ರಯೋಜನವಾಗಿಲ್ಲ. ಈಗ ಕಾಂಗ್ರೇಸ್ ಆಧಾರವನ್ನು ಕಳೆದುಕೊಂಡಿದೆ.
ಅವಿಭಜಿತ ದ.ಕ ಜಿಲ್ಲೆಯಲ್ಲಿ ನಾಳ್ವರು ಸಚಿವರಿರುವಾಗ ಜನತೆ ಭಾರಿ ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದರು. ಆದರೆ ದ.ಕ, ಜ ಲ್ಲಾ ಉಸ್ತುವರಿ ಸಚಿವರು ಸೇರಿದಂತೆ ಜಿಲ್ಲೆಗೋಸ್ಕರ ಏನನ್ನಾದರೂ ಮಾಡಿದ್ದರೆ ಸಾಬೀತು ಪಡಿಸಲಿ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಆದ ಅಭಿವೃದ್ಧಿಯ ಕಾರ್ಯಗಳನ್ನು ನಾವೂ ಬಹಿರಂಗ ಪಡಿಸುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ
ಲೋಕಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಎ.ರುಕ್ಮಯ ಪೂಜಾರಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಕ್ಷೇತ್ರ ಸಮಿತಿ ಚುನಾವಣಾ ಪ್ರಮುಖ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ, ಪಕ್ಷದ ಪ್ರಮುಖರಾದ ಶ್ರೀಕರ ಪ್ರಭು, ಸಂಜೀವ ಮಠಂದೂರು, ದಿನೇಶ್ ಭಂಡಾರಿ, ವಿನಯ ನಾಯಕ್, ಪುರುಷ ಸಾಲಿಯನ್, ಪುಷ್ಪರಾಜ ಶೆಟ್ಟಿ, ಪ್ರಥ್ವಿರಾಜ್, ದೇವಪ್ಪ ಪೂಜಾರಿ, ಆನಂದ ಶಂಭೂರು ಮೊದಲಾದವರಿದ್ದರು.





