ಬಂಟ್ವಾಳ: ತುಳುನಾಡಿನಲ್ಲಿ ದೈವಾರಾದನೆಯಂತಹ ಆಚರಣೆಯಿಂದ ಎಲ್ಲರನ್ನೂ ಬಾಂಧವ್ಯದ ಬೆಸುಗೆಯಿಂದ ಒಟ್ಟುಗೂಡಿಸುವ ಮೂಲಕ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚಳವಾಗುತ್ತದೆ ಎಂದು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.
ತಾಲ್ಲೂಕಿನ ಮಂಚಿ ಗ್ರಾಮದ ಕಲ್ಕಾರು ಅಣ್ಣಪ್ಪ ಮತ್ತು ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಒಡಿಯೂರು ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಸಂಜೀವ ಶೆಟ್ಟಿ ಅಳಿಕೆ ಧಾರ್ಮಿಕ ಉಪನ್ಯಾಸ ನೀಡಿದರು.
ಇದೇ ವೇಳೆ ಯುವ ಭಾಗವತ ಪಟ್ಲ ಸತೀಶ್ ಶೆಟ್ಟಿ, ದೈವ ನರ್ತಕ ಲೋಕಯ್ಯ ಸೇರಾ, ಹಿರಿಯ ಪಾಕತಜ್ಞ ಕೃಷ್ಣ ಕಾರಂತ ಕಲ್ಲಡ್ಕ ಇವರನ್ನು ಸಮ್ಮಾನಿಸಲಾಯಿತು.
ವಾದಿರಾಜ ಕಲ್ಲೂರಾಯ ಅಭಿನಂದನಾ ಭಾಷಣ ಮಾಡಿದರು. ಕಲ್ಕಾರು ದೈವಸ್ಥಾನ ಅಭಿವೃದ್ದಿ ಸಮಿತಿ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಸ್ವಾಗತಿಸಿ, ಸಮಿತಿ ಸದಸ್ಯ ರವಿ ರೈ ವಂದಿಸಿದರು. ರಾಜೀವ ಶೆಟ್ಟಿ ಎಡ್ತೂರು ಕಾರ್ಯಕ್ರಮ ನಿರೂಪಿಸಿದರು.