ಬಂಟ್ವಾಳ ತಾಲ್ಲೂಕಿನ ಸೋರ್ಣಾಡು ಬಂಡಸಾಲೆ ಎಂಬಲ್ಲಿ ನಿರ್ಮಾಣಗೊಂಡ ‘ಶ್ರೀಕೃಷ್ಣ ಕೃಪಾ’ ನೂತನ ಕಟ್ಟಡದಲ್ಲಿ ಗುರುವಾರ ಶುಭಾರಂಭಗೊಂಡ ಕೆನರಾ ಬ್ಯಾಂಕಿನ ಶಾಖೆಯನ್ನು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಹರಿದೀಶ್ ಕುಮಾರ್ ಬಿ. ಉದ್ಘಾಟಿಸಿದರು.
ಉಪ ಮಹಾಪ್ರಬಂಧಕಿ ಸುಜಾತ ಕರುಣಾಕರನ್, ಸಹಾಯಕ ಮಹಾ ಪ್ರಬಂಧಕ ಕೆ.ಎಸ್.ಆಚಾರ್ಯ, ಶಾಖಾಧಿಕಾರಿ ರಮೇಶ ನಾಯ್ಕ್ ಮತ್ತಿತರರು ಇದ್ದರು.
