ಬಂಟ್ವಾಳ: ಕರ್ನಾಟಕ ಸರಕಾರಉದ್ಯೋಗ ಮತ್ತುತರಬೇತಿ ಇಲಾಖೆ ಬೆಂಗಳೂರು, ಬಿ.ಎ. ಕೈಗಾರಿಕಾತರಬೇತಿ ಸಂಸ್ಥೆ ತುಂಬೆಇದರ ವತಿಯಿಂದ ವಾರ್ಷಿಕ ವಿಶೇಷ ಶಿಬಿರವು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ನಡೆದ ಒಂದು ವಾರದ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಮಾ.28 ಶನಿವಾರ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀಅಬ್ದುಲ್ ಸಲಾಂ ನಿರ್ದೇಶಕರು ಬಿ.ಎ. ಸಮೂಹ ಸಂಸ್ಥೆ ತುಂಬೆಇವರು ಮಾತನಾಡಿ ಈ ಶಿಬಿರದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬುಇಲ್ಲಿನಎಲ್ಲಾ ಸಮಾಜಮುಖ ಕೆಲಸಗಳಲ್ಲಿ ಸಂಸ್ಥೆಗೆ ಗೌರವವನ್ನುತಂದುಕೊಟ್ಟಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.

ಶಾಲೆಗೆ ಸುಣ್ಣ ಬಣ್ಣವನ್ನು ಬಳಿದು ಕಂಪ್ಯೂಟರ್‍ಕೊಠಡಿಗೆ ವಿದ್ಯುತ್ ವಯರಿಂಗ್, ಶೌಚಾಲಯಗಳ ದುರಸ್ಥಿ ಮತ್ತು ಶುಚಿತ್ವ ಹಾಗೂ ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿ ಇಲ್ಲಿನಜನತೆಯ ಪ್ರೀತಿ ಪಾತ್ರರಾಗಿರುವುದು ನಮ್ಮ ಸಂಸ್ಥೆಗೆ ಸಂದಗೌರವಎಂದು ಹರ್ಷವ್ಯಕ್ತಪಡಿಸಿದರು.ಮುಖ್ಯತಿಥಿಯಾಗಿ ಆಗಮಿಸಿದ ಶ್ರೀ ಶೇಷಶಯನಕಾರಿಂಜಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ ಇವರು ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.ಇನ್ನೋರ್ವ ಮುಖ್ಯಅತಿಥಿ ಶ್ರೀ ಪ್ರಕಾಶ್‍ಕಾರಂತ್‍ರೋಟರಿಅಧ್ಯಕ್ಷರು ಬಂಟ್ವಾಳ ಇವರು ಮಾನಾಡಿಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿದೆಸೆಯಲ್ಲಿ ಸೇವಾ ಚಟುವಟಿಕೆ, ಕೂಡಿಬಾಳುವ ಮತ್ತು ನಾಯಕತ್ವಗುಣವನ್ನು ಬೆಳೆಸಿಕೊಂಡು ಯಶಸ್ವಿ ಜೀವನ ನಡೆಸಲು ಸಹಕಾರಿಯಾಗುತ್ತದೆಎಂದು ತಿಳಿಸಿದರು.ಶ್ರೀ ರವಿ ಅಂಚನ್‍ಅಧ್ಯಕ್ಷರು ಶಾಲಾಭಿವೃದ್ಧಿಸಮಿತಿ ನರಿಕೊಂಬು ಹಾಗೂ ಶ್ರೀಮತಿ ಶಾರದಾ ಮುಖ್ಯಶಿಕ್ಷಕಿ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬುಇವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶ್ರೀ ನವೀನ್‍ಕುಮಾರ್‍ಕೆ.ಎಸ್. ಪ್ರಚಾರ್ಯರು ಬಿ.ಎ. ಕೈಗಾರಿಕಾತರಬೇತಿ ಸಂಸ್ಥೆ ತುಂಬೆಇವರುಸಮಾರೋಪ ಭಾಷಣ ಮಾಡಿದರು.ಶಿಬಿರಾಧಿಕಾರಿ ಶ್ರಿ ಮಿಥುನ್ ಎ.ಎಸ್. ಸ್ವಾಗತಿಸಿ, ಕಿರಿಯತರಬೇತಿ ಅಧಿಕಾರಿಗಳಾದ ಶ್ರೀ ಕಿಶನ್‍ದನ್ಯವಾದಗೈದರು ಹಾಗೂ ಶ್ರೀ ರಾಜೇಶ್ ಟಿ. ಕಾರ್ಯಕ್ರಮ ನಿರ್ವಹಿಸಿದರು.
