ಬಂಟ್ವಾಳ: ಬಿ.ಎ. ಕೈಗಾರಿಕಾತರಬೇತಿ ಸಂಸ್ಥೆ ತುಂಬೆಮತ್ತು ಫಾದರ್ ಮುಲ್ಲರ್ಸ್‍ಆಸ್ಪತ್ರೆ ಮತ್ತು ಹೋಮಿಯೋಪತಿ ಮಹಾವಿದ್ಯಾಲಯ ಮಂಗಳೂರು ಇದರ ವತಿಯಿಂದಉಚಿತಆರೋಗ್ಯತಪಾಸಣೆ ಮತ್ತುಹೋಮಿಯೋಪತಿ ವೈದ್ಯಕೀಯ ಪದ್ಧತಿಯ ಬಗ್ಗೆ ಮಾಹಿತಿಶಿಬಿರವು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬುಇಲ್ಲಿ ಮಾ. 25 ಬುಧವಾರ ನೆರವೇರಿತು. ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಆಗಮಿಸಿದ ಶ್ರೀಮತಿ ಸುಮತಿ ಸದಾನಂದಗ್ರಾಮ ಪಂಚಾಯತ್‍ಅಧ್ಯಕ್ಷರು ನರಿಕೊಂಬು, ಇವರು ಶಿಬಿರದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯಂತ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸೇವಾ ಮನೋಭಾವನೆ, ಜೀವನದಲ್ಲಿ ಶಿಸ್ತು, ಎಲ್ಲರೊಂದಿಗೆ ಬೆರೆಯುವ ಮನೋಭಾವ ಇತ್ಯಾದಿಗಳನ್ನು ಕಲಿಸಿಕೊಡುತ್ತದೆ. ಇಂತಹವೈದ್ಯಕೀಯ ಶಿಬಿರದ ಅನಕೂಲವನ್ನು ನರಿಕೊಂಬುಗ್ರಾಮದಜನತೆ ಪಡೆಯುವಲ್ಲಿ ಯಶಸ್ವಿಯಾಗಲಿಎಂದು ಹರ್ಷವ್ಯಕ್ತಪಡಿಸಿ ಶಿಬಿರಕ್ಕೆ ಶುಭ ಹಾರೈಸಿದರು.

ವೈದ್ಯಧಿಕಾರಿಗಳು ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಡಾ| ರಂಜನ್ ಬ್ರಿಟ್ಟೊಡಾ| ರೇವನ್ ಹಾಗೂ ಡಾ| ಪ್ರಜ್ಞಾ ಆಳ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸುಮಾರು ಹದಿನೈದುಜನ ವೈದ್ಯ ಭಾಗವಹಿಸಿ ಉಚಿತಆರೋಗ್ಯತಪಾಸಣೆಯೊಂದಿಗೆಉಚಿತಜೌಷಧ ವಿತರಣೆ ಮಾಡಿದರು.ಶ್ರೀ ನವೀನ್‍ಕುಮಾರ್‍ಕೆ.ಎಸ್. ಪ್ರಚಾರ್ಯರು ಬಿ.ಎ. ಕೈಗಾರಿಕಾತರಬೇತಿ ಸಂಸ್ಥೆ ತುಂಬೆ ಪ್ರಸ್ತಾವಿಕವಾಗಿ ಮಾತನಾಡಿದರು.ಶಿಬಿರಾಧಿಕಾರಿ ಶ್ರಿ ಮಿಥುನ್‍ಎ.ಎಸ್. ಕಾರ್ಯಕ್ರಮ ನಿರ್ವಹಿಸಿದರು ಹಾಗೂ ಶ್ರೀ ಕಿಶನ್‍ದನ್ಯವಾದಗೈದರು.ಶ್ರೀ ರವಿ ಅಂಚನ್‍ಅಧ್ಯಕ್ಷರು ಶಾಲಾಭಿವೃದ್ಧಿಸಮಿತಿ ನರಿಕೊಂಬು ಮತ್ತುಶ್ರೀಮತಿ ಶಾರದಾ ಮುಖ್ಯಶಿಕ್ಷಕಿ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬುಇವರು ಉಪಸ್ಥಿತರಿದ್ದರು.
