ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಬಳಿ ಮಲಾೈಕಾ ಸಂಸ್ಥೆಯ ಹವಾ ನಿಯಂತ್ರಿತ `ಯಸೋಮ ವೆಡ್ಡಿಂಗ್ ಸಾರೀ ಎಂಪೋರಿಯಂ’ ಬೃಹತ್ ವಸ್ತ್ರ ಮಳಿಗೆ ಇಲ್ಲಿನ ಶಾಂತಾರಾಮ ಕಟ್ಟಡದಲ್ಲಿ ಭಾನುವಾರ ಶುಭಾರಂಭಗೊಂಡಿತು.

ಬಿ.ಸಿ.ರೋಡ್‍ನ ಬೆಸ್ಟ್ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ಬಿ.ಧನಭಾಗ್ಯ ರಮಾನಾಥ ರೈ ಮಳಿಗೆ ಉದ್ಘಾಟಿಸಿ ಮಾತನಾಡಿ, ಬಿ.ಸಿ.ರೋಡ್‍ನಲ್ಲಿ ಪ್ರಥಮ ಬಾರಿಗೆ ಹವಾನಿಯಂತ್ರಿತ ಮತ್ತು ಸುಸಜ್ಜಿತ ವಸ್ತ್ರಮಳಿಗೆ ಆರಂಭಗೊಂಡಿರುವುದು ಇಲ್ಲಿನ ಮಹಿಳಾ ಗ್ರಾಹಕರಿಗೆ ಸಂತಸ ತಂದಿದೆ ಎಂದರು.
ಮೊಡಂಕಾಪು ಬಾಲಯೇಸು ಚರ್ಚಿನ ಪ್ರಧಾನ ಧರ್ಮಗುರು ಮ್ಯಾಕ್ಸಿಂ ಎಲ್.ನೊರೊನ್ಹಾ ಆಶೀರ್ವಚನ ನೀಡಿದರು.
ಹಿಲರಿ ಲೋಬೊ ಬೈಬಲ್ ವಾಚಿಸಿ ಪಾರ್ಥಿಸಿದರು. ಬಂಟ್ವಾಳ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಸದಸ್ಯ ಮೊಹಮ್ಮದ್ ನಂದರಬೆಟ್ಟು, ಮಾಜಿ ಸದಸ್ಯ ರಾಜೇಶ್ ಎಲ್.ರೊಡ್ರಿಗಸ್, ಉದ್ಯಮಿ ಉದಯ ಕುಮಾರ್ ರೈ, ಪ್ರಮುಖರಾದ ಪಿ.ಎ.ರಹೀಂ, ಶರಣ್ ಪಂಪ್‍ವೆಲ್, ಸ್ಟೇನಿ ಆಳ್ವರೆಸ್, ವಕೀಲರಾದ ಚಂದ್ರಶೇಖರ ಪೂಜಾರಿ, ಜಗದೀಶ್ ಕೆ.ಶೇಣವ ಮತ್ತಿತರರು ಶುಭ ಹಾರೈಸಿದರು.
ಇದೇ ವೇಳೆ ಕಟ್ಟಡದ ಮಾಲೀಕ ಸಂಜೀವ ಎಸ್.ಶೆಟ್ಟಿ ಮತ್ತು ಜಯಂತಿ ಎಸ್.ಶೆಟ್ಟಿ ದಂಪತಿಯನ್ನು ಸಮ್ಮಾನಿಸಲಾಯಿತು.
ಸಂಸ್ಥೆ ನಿರ್ದೇಶಕಿ ಮಾರ್ಸೆಲಿನಾ ಜಿ.ಬ್ಯಾಷ್ಟಿಸ್ಟ್, ಪ್ರಮುಖರಾದ ಮನೋಹರ್ ಶೆಟ್ಟಿ, ಫೆಲಿಕ್ಸ್ ವೇಗಸ್ ಮೊಡಂಕಾಪು, ರೀಮಾ ಸಂದೀಪ್, ಈಶ್ವರ್ ದೇವಾಡಿಗ, ಕವಿತಾ ಆಚಾರ್ಯ, ಡೈನಾ ಡಿ’ಸೋಜಾ ಮತ್ತಿತರರು ಇದ್ದರು.
ಮಲಾೈಕಾ ಸಮೂಹ ಸಂಸ್ಥೆ ಆಡಳಿತ ನಿರ್ದೇಶಕ ಗಿಲ್ಬರ್ಟ್ ಬ್ಯಾಪ್ಟಿಸ್ಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾದೇಶಿಕ ಪ್ರಬಂಧಕ ಸಿರಿಲ್ ಕ್ರಾಸ್ಟ ವಂದಿಸಿದರು.
ಕೆವಿನ್ ಡಿ’ಸೋಜಾ ಲೊರೆಟ್ಟೋ ಕಾರ್ಯಕ್ರಮ ನಿರೂಪಿಸಿದರು.
