ಬಂಟ್ವಾಳ : ಬಂಟ್ವಾಳ ನಗರ ಪ್ರದೇಶದ ಬಿ.ಸಿ.ರೋಡ್‍ನಲ್ಲಿ ನಾಳೆ ಭಾನುವಾರ ಪೂರ್ವಾಹ್ನ ಶುಭಾರಂಭಗೊಳ್ಳಲಿರುವ `ಮಲಾೈಕಾ ಸಂಸ್ಥೆಯ ಬಿಗ್ಗೆಸ್ಟ್ ಯಸೋಮ ವೆಡ್ಡಿಂಗ್ ಸಾರೀ ಎಂಪೋರಿಯಂ’ ಏರ್ ಕಂಡೀಶನ್ಡ್ ಸಿದ್ಧ ಉಡುಪುಗಳ ಮಳಿಗೆಗೆ ಇಂದಿಲ್ಲಿ ಶನಿವಾರ ಅಪರಾಹ್ನ ದಕ್ಷಿಣ ಕನ್ನಡ ಜಿಲ್ಲಾ ಸಂಸದ ಶ್ರೀ ನಳೀನ್‍ಕುಮಾರ್ ಕಟೀಲು ಭೇಟಿ ನೀಡಿ ಶುಭಾರೈಸಿದರು.
ಮಲಾೈಕಾ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಗಿಲ್ಬರ್ಟ್ ಬ್ಯಾಪ್ಠಿಸ್ಟ್ ಮತ್ತು ನಿರ್ದೇಶಕಿ ಶ್ರೀಮತಿ ಮಾರ್ಸೆಲಿನಾ ಜಿ. ಬ್ಯಾಪ್ಠಿಸ್ಟ್ ಸಂಸದ ಕಟೀಲು ಅವರನ್ನು ಪುಷ್ಫಗುಪ್ಚಚನ್ನಿತ್ತು ಸ್ವಾಗತಿಸಿ ಅಭಿನಂದಿಸಿದರು.

Yasoma Nalinkumar Kateel-A5
Yasoma Nalinkumar Kateel-A3

Yasoma Nalinkumar Kateel-A4

 

Yasoma Nalinkumar Kateel-A1
ಮಲಾೈಕಾ ಸಂಸ್ಥೆ ನಮ್ಮ ನಾಡಿಗ್ಮೊಭಿಮಾನದ ಸಂಸ್ಥೆಯಾಗಿದೆ. ಉದ್ಯಮಿಯೋರ್ವರು ತನ್ನ ಹುಟ್ಟೂರಲ್ಲಿ ಉದ್ಯಮವನ್ನು ಆರಂಭಿಸಿ ನೂರಾರು ಜನತೆಗೆ ಉದ್ಯೋಗವನ್ನು ಕಲ್ಪಿಸಿದ್ದಾರೆ. ಬೃಹನ್ಮುಂಬಯಿಯಲ್ಲಿ ಗೃಹಪಯೋಗಿ ವಸ್ತುಗಳ ಪ್ರದರ್ಶನ, ಮಾರಾಟ ಹಾಗೂ ವಿತರಣೆಗೆ ತುಳು-ಕನ್ನಡಿಗರ ಮನ-ಮನೆ ಮಾತಾಗಿರುವ ಮಲಾೈಕಾ ಸಂಸ್ಥೆ ನಮ್ಮೂರ ಹೆಮ್ಮೆಯ ಸಂಸ್ಥೆಯಾಗಿದೆ. ಬಂಟ್ವಾಳ ಆಸುಪಾಸಿನಾದ್ಯಂತ ಇನ್ನೊಂದು ಬೃಹತ್ ಅತ್ಯಾಧುನಿಕ ಸೀರೆಗಳ ಮಳಿಗೆ, ಸಿದ್ಧ ಉಡುಪುಗಳ ಎಂಪೋರಿಯಂ ಮತ್ತೊಂದುಯಿಲ್ಲ. ಈ ಸಂಸ್ಥೆಯು ಗ್ರಾಹಕರ ಮನಮೆಚ್ಚಿನ ಸಂಸ್ಥೆಯಾಗಿ ಸೇವಾ ನಿರತವಾಗಲಿ ಎಂದು ಸಂಸದ ನಳೀನ್‍ಕುಮಾರ್ ಆಶಯ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಮಲಾೈಕಾ ಸಂಸ್ಥೆಯ ಹಿರಿಯ ಆರ್ಥಿಕ ಪ್ರಬಂಧಕ ಮನೋಹರ್ ಶೆಟ್ಟಿ, ಸ್ಥಾನೀಯ ಪ್ರಾದೇಶಿಕ ಪ್ರಬಂಧಕ ಸಿರಿಲ್ ಕ್ರಾಸ್ಟ, ಹಿರಿಯ ವ್ಯವಸ್ಥಾಪಕ ಫೆಲಿಕ್ಸ್ ವೇಗಸ್ ಮೊಡಂಕಾಪು, ಪ್ರಬಂಧಕಿ ರೀನಾ ಸಂದೀಪ್, ಉದ್ಯಮಿ ಉದಯಕುಮಾರ್ ರೈ, ಜೆಸಿಂತಾ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *