ಬಂಟ್ವಾಳ: ಸಜೀಪಮುನ್ನೂರು ಗ್ರಾ.ಪಂ.ವ್ಯಾಪ್ತಿಯ ನಂದಾವರ ನದಿ ಕಿನಾರೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಸ್ಥಗಿತಗೊಂಡಿದ್ದ ಅಕ್ರಮ ಮರಳುಗಾರಿಕೆ ಪುನಾರಂಭಗೊಂಡಿದೆ. ಎರಡು ಭಾರಿ ಕಂದಾಯ ಅಧಿಕಾರಿಗಳು ದಾಳಿ ನಡೆಸಿ, ಸೊತ್ತುಗಳನ್ನು ವಶಪಡಿಸಿಕೊಂಡ ವೇಳೆ ಸ್ಥಗಿತಗೊಂಡಿದ್ದ ಮರಳುಗಾರಿಕೆ ಗುರುವಾರದಿಂದ ಪ್ರಾರಂಭಗೊಂಡಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗುರುವಾರ ಒಂದೆರಡು ದೋಣಿಗಳು ಮಾತ್ರ ಕಂಡು ಬಂದಿತ್ತು. ಶುಕ್ರವಾರದ ವೇಳೆಗೆ ಹತ್ತಕ್ಕಿಂತಲೂ ಅಧಿಕ ದೋಣಿಗಳು ಮರಳು ಸಂಗ್ರಹಣೆಗಾಗಿ ನದಿ ತಟದಲ್ಲಿ ಲಂಗರು ಹಾಕಿದೆ. ಮರಳು ಸಾಗಾಟ ಲಾರಿಗಳು ಹಿಂದಿನಂತೆಯೇ ಓಡಾಟ ಆರಂಭಿಸಿದೆ. ನದಿ ತಟದಲ್ಲಿ ಮರಳು ಸಂಗ್ರಹಿಸುವ ಕಾಮರ್ಿಕರು ಟೆಂಟು ಕಂಡು ಬಂದಿದ್ದು ಮತ್ತೆ ಅವ್ಯಾಹತವಾಗಿ ಮರಳುಗಾರಿಕೆ ನಡೆಸುವ ಬಗ್ಗೆ ಸೂಚನೆ ಸಿಕ್ಕಿದೆ. ಪದೇ ಪದೇ ದಾಳಿ ನಡೆದರೂ ಕೆಲವೇ ದಿನಗಳಲ್ಲಿ ಮತ್ತೆ ದಂದೆ ಆರಂಭಿಸುವ ಈ ಮರಳು ಮಾಫಿಯಾಕ್ಕೆ ರಾಜಕೀಯ ಶೀರಕ್ಷೆ, ಪ್ರಭಾವಿ ವ್ಯಕ್ತಿಗಳ ಕೈವಾಡ ಹಾಗೂ ಅಧಿಕಾರಿಗಳ ಶಾಮೀಲಾತಿ ಇರುವ ಬಗ್ಗೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.
ಮರಳು ಅಡ್ಡೆಗೆ ಸಹಾಯಕ ಆಯುಕ್ತ ಡಾ. ಅಶೋಕ್ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳ ತಂಡ ದಾಳಿ ನಡೆಸಿ ದಂಡವನ್ನು ವಿಧಿಸಿತ್ತು. ಇದಾದ ಎರಡೇ ದಿನಗಳಲ್ಲಿ ಮತ್ತೆ ಮರಳುಗಾರಿಕೆ ಪ್ರಾರಂಭಗೊಂಡಿತ್ತು. ಆ ಬಳಿಕ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳ ತಂಡ ಮತ್ತೆ ದಾಳಿ ನಡೆಸಿ 9 ದೋಣಿಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಬಿಹಾರ ಮೂಲದ ನದಿನೀರಿನಿಂದ ಮರಳು ಮೇಲೆತ್ತುವ ಕಾಮರ್ಿಕರನ್ನು ಸ್ಥಳದಿಂದ ತೆರಳುವಂತೆ ಸೂಚಿಸಿ ಮರುದಿನ ಮುಂಜಾನೆ ಮತ್ತೆ ಸ್ಥಳಕ್ಕೆ ತೆರಳಿ ಮುಂದಕ್ಕೆ ಇಂತಹ ಅಕೃತ್ಯಕ್ಕೆ ಇಳಿದರೆ ಜಾಮೀನು ರಹಿತ ನಿರ್ಬಂಧ ವಿದಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು. ಸ್ಥಳೀಯ ನಾಗರಿಕರ ವಿರುದ್ದ ದಬ್ಬಾಳಿಕೆ ಮಾಡುತ್ತಿರುವ ಮರಳು ಮಾಫಿಯಾ ಹಾಗೂ ಮರಳು ಮಾಫಿಯದೊಂದಿಗೆ ಕೈ ಜೋಡಿಸಿರುವ ಅಧಿಕಾರಿ ವರ್ಗದ ವಿರುದ್ದ ಸಜೀಪಮುನ್ನೂರು ಗ್ರಾಮಸ್ಥರು ಪಂಚಾಯತ್ ಕಚೇರಿ ಧರಣಿ ನಡೆಸಿದ್ದರು. ದಾಳಿ, ಪ್ರತಿಭಟನೆ ಇದ್ಯಾವುದನ್ನು ಲೆಕ್ಕಿಸದೆ ಮರಳು ದಂದೆ ಮತ್ತೆ ಮುಂದುವರಿದಿರುವುದು ಜಿಲ್ಲಾಡಳಿತ ಮರಳುದಂದೆಯೊಂದಿಗೆ ಶಾಮೀಲಾಗಿರುವುದಕ್ಕೆ ಸಾಕ್ಷಿಯಂತಿದೆ ಎನ್ನುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

