ಬಂಟ್ವಾಳ: ದ.ಕ.ಜಿಲ್ಲಾ ರೋಗವಾಹಕ ಆಶಿತ(ಆಶ್ರಿತ) ರೋಗಗಳ ನಿಯಂತ್ರಣಾ„ಕಾರಿಗಳ ಕಛೇರಿ, ಆರೋಗ್ಯ ಇಲಾಖೆ (ಮಂಗಳೂರು)ಇವರ ವತಿಯಿಂದ ಮಂಗಳೂರು ಗಣೇಶಪುರ ಗಿರೀಶ ನಾವಡ ಮತ್ತು ಬಳಗದವರಿಂದ ಡೆಂಗ್ಯೂ ರೋಗ ಬಾರದಂತೆ ತಡೆಗಟ್ಟುವ ಬಗ್ಗೆ ಬೀದಿ ನಾಟಕ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಎ.15 ಬುದವಾರ ನಡೆಯಿತು.

ಡೆಂಗ್ಯೂ ಬಾರದಂತೆ ಎಚ್ಚರವಹಿಸಬೇಕು. ಸೊಳ್ಳೆಗಳು ಕಚ್ಚದಂತೆ ಎಚ್ಚರವಾಗಿ ಕೈಕಾಲು ಮುಚ್ಚುವಂತೆ ಬಟ್ಟೆ ಧರಿಸಬೇಕು. ಮನೆ, ಪರಿಸರದಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರವಾಗಿರಬೇಕು. ಕನಿಷ್ಠ ವಾರಕ್ಕೊಮ್ಮೆ ಡ್ರೈ ಡೇ ಆಚರಣೆ ಕಡ್ಡಾಯ. ಜ್ವರ ಬಂದಾಗ ನಿರ್ಲಕ್ಷಿಸಬಾರದು. ಟಯರ್, ಪ್ಲಾಸ್ಟಿಕ್, ಎಳನೀರು ಚಿಪ್ಪಿನಲ್ಲಿ ನೀರು ಶೇಖರವಾಗದಂತೆ ನಿಗಾವಹಿಸಬೇಕು ಎಂಬ ಮಾಹಿತಿಯನ್ನು ಬೀದಿನಾಟಕದಲ್ಲಿ ತಿಳಿಸಲಾಯಿತು. ಗಣೇಶಪುರ ಗಿರೀಶ ನಾವಡ, ವಿಶ್ವನಾಥ ಶೆಟ್ಟಿ , ಮನೋಜ್ ಗಣೇಶಪುರ, ಕೀರ್ತನ್, ನವೀನ ಅವರು ಬೀದಿನಾಟಕದಲ್ಲಿ ಕಲಾವಿದರಾಗ್ದಿರು.
