ಪೊಳಲಿ: ಚಿತ್ರನಟಿ ರಾಧಿಕಾ ಅಂದರೆ ಬರೀ ನಟಿಯಲ್ಲ. ಅವರೊಬ್ಬ ಅಪಾರ ದೈವಭಕ್ತೆಯೂ ಹೌದು. ದೂರದ ಬೆಂಗಳೂರಿನಲ್ಲಿದ್ದರೂ ತನ್ನ ಹುಟ್ಟೂರಾದ ಮಂಗಳೂರಿನ ಬಹುತೇಕ ದೈವಸ್ಥಾನ-ದೇವಸ್ಥಾನಗಳಿಗೆ ಆಗಾಗ್ಗೆ ಬೇಟಿ ನೀಡಿ ದೇವರ ದರುಶನ ಪಡೆದು ಪ್ರಾರ್ಥಿಸುವುದು ರಾಧಿಕಾ ಅವರ ಹವ್ಯಾಸವೇ ಆಗಿ ಬಿಟ್ಟಿದೆ. ಅದೆಷ್ಟೋ ಭಾರಿ ನಮ್ಮ ನಾಡಿನ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

8

9

15

16

18

21
ತುಳುನಾಡಿನ  ಶ್ರೀ ಕ್ಷೇತ್ರಗಳಿಗೆ  ಆಗಾಗ್ಗೆ ಮನೆಮಂದಿಯೊಂದಿಗೆ   ಬಹುತೇಕ ದೇವಸ್ಥಾನಗಳಿಗೆ ಬೇಟಿ  ನೀಡುತ್ತಾರೆ.  ರಾಧಿಕಾ ಇದೀಗ ಮತ್ತೊಮ್ಮೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.  ದೇವಳದ  ಅರ್ಚಕರಾದ ಪರಮೇಶ್ವರ ಭಟ್ ಪ್ರಸಾದ ನೀಡಿದರು. ಅವರು ನನಗೆ ದೈವದೇವರೆಂದರೆ ನನಗೆ ಅಪಾರ  ಭಕ್ತಿ   ಶ್ರಧ್ದೆ  ಇದ್ದುದರಿಂದ ನಾನು ಯಾವಗಲು ಊರಿಗೆ ಬಂದಾಗ ದೇವಸ್ಥಾನಕ್ಕೆ ಬಂದು ಹೋಗುವುದಾಗಿ    ಮಾಧ್ಯಮ ಸ್ನೇಹಿತರೊಂದಿಗೆ ಮಾತಾಡಿಕೊಂಡರು.

ಈ ವೇಳೆ ಹಲವು ಜನರು ರಾಧಿಕಳೊಂದಿಗೆ ಫೋಟೊ ತೆಗೆಯಲು ಮುಂದಾದರು ಎಲ್ಲರಲ್ಲು ಆತ್ಮೀಯತೆಯಿಂದ ಫೊಟೋ ತೆಗೆಯಲು ಛಾಯಚಿತ್ರನಕ್ಕೆ  ಫೋಸ್  ನೀಡಿದರು.
ರಾಧಿಕಾ ಮೂಲತಃ ದಕ್ಷಿಣಕನ್ನಡದ  ಮಂಗಳೂರಿನವರಾದ   ರಾಧಿಕ  ಅವರ  ತಂದೆ ಬಂಟ್ವಾಳ ತಾಲೂಕಿನ ಸಾಲೆತ್ತೂರು ಪಾಲ್ತಾಜೆ ಎಂಬಲ್ಲಿ ಜಾಗವನ್ನು ಖರೀದಿಸಿದ್ದು ಅಲ್ಲಿ ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ದೈವಸ್ಥಾನಗಳನ್ನು ಪುನನಿರ್ಮಿಸಿ ಬ್ರಹ್ಮಕಲಶೋತ್ಸವ ನಡೆಸಿದ್ದಲ್ಲದ್ದೆ ನಾಗದೇವರಿಗೆ ನಾಗಮಂಡಲೋತ್ಸವವನ್ನು ಅರ್ಥಪೂರ್ಣವಾಗಿ ನೆರವೇರಿಸಿದ್ದರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸ್ವತಃ ರಾಧಿಕಾ ಅವರೇ ಸಕ್ರೀಯರಾಗಿ ಪಾಲ್ಗೊಂಡು ತಮ್ಮ ನಾಡು, ಸಂಸ್ಕೃತಿ, ಆಚಾರ ವಿಚಾರಗಳ ಮೇಲಿನ ಶ್ರದ್ದಾಭಕ್ತಿಯನ್ನು ಮೆರೆದಿದ್ದರು.
ಪ್ರತಿವರ್ಷ ಕಟೀಲು, ಪೊಳಲಿ ಮತ್ತಿತರ ದೇವಸ್ಥಾನಗಳಿಗೆ ಬೇಟಿ ನೀಡುವ ರಾಧಿಕಾ ಅವರು ದೇವಸ್ಥಾನಗಳ ಪುನರ್ನಿರ್ಮಾಣ, ಅಭಿವೃದ್ಧಿ ಮೊದಲಾದ ಧಾರ್ಮಿಕ ಸತ್ಕಾರ್ಯಗಳಿಗೆ ಆರ್ಥಿಕ ನೆರವನ್ನು ನೀಡುವ ಕೈಂಕರ್ಯವನ್ನೂ ಸದ್ದಿಲ್ಲದೆ ಮಾಡುತ್ತಾ ಬಂದಿದ್ದಾರೆ.

By Suddi9

Leave a Reply

Your email address will not be published. Required fields are marked *