ಮೂಡುಬಿದಿರೆ : ಆಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ನಿಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡುಗೆಯಾಗಿ ರೂ 5 ಲಕ್ಷವನ್ನು ನೀಡಿದ್ದಾರೆ.
ಸಚಿವ ಕೆ. ಅಭಯಚಂದ್ರ ಅವರು ಈ 5ಲಕ್ಷದ ಕೊಡುಗೆಯ ಚೆಕ್ಕನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಈಶ್ವರ ಭಟ್ ಅವರಿಗೆ ಗುರುವಾರ ಪೂರ್ವಾಹ್ನ ಹಸ್ತಾಂತರಿಸಿದರು.
mbd_april16_4
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅಭಯಚಂದ್ರ ಜೈನ್, ರಾಜ್ಯದ ಎಲ್ಲಾ ಭಾಗಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇವಸ್ಥಾನಗಳಿಗೆ ಧರ್ಮಸ್ಥಳದ ಧರ್ಮಾ ಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಕ್ಷೇತ್ರದ ವತಿಯಿಂದ ಕಾಣಿಕೆಯನ್ನು ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಮೂಡುಬಿರೆ ಆಲಂಗಾರು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಈಶ್ವರ ಭಟ್ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 1 ಕೋಟಿಯಷ್ಟು ಖರ್ಚ್ ಮಾಡಿದ್ದು ಇದನ್ನು ಗುರುತಿಸಿ ಧರ್ಮಸ್ಥಾನ ಟ್ರಸ್ಟ್ನ ಮೂಲಕ 5ಲಕ್ಷದ ಚೆಕ್ಕನ್ನು ನೀಡಿದ್ದು ಅದನ್ನು ಹಸ್ತಾಂತರಿಸಲಾಗಿದೆ ಎಂದರು.
ಮೂಡುಬಿದಿರೆ ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷ, ಪುರಸಭಾ ಸದಸ್ಯ, ಪಿ.ಕೆ ಥೋಮಸ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಕಳ ತಾಲೂಕಿನ ಯೋಜನಾಧಿಕಾರಿ ಮುರಳೀಧರ, ದೇವಸ್ಥಾನದ ಸುಬ್ಯಹ್ಮಣ್ಯ ಭಟ್, ಪ್ರಸಾದ್ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *