ಮೂಡುಬಿದರೆ : ಮೂಡುಬಿದರೆಯ ಹಿರಿಯ ಕಾರು ಚಾಲಕ ಡ್ರೈವರ್ ಚಂದ್ರಯ್ಯಣ್ಣ ಎಂದೇ ಕರೆಯಲ್ಪಡುತ್ತಿದ್ದ ಮಾಸ್ತಿಕಟ್ಟೆ ನಿವಾಸಿ ಚಂದ್ರಯ್ಯ ಆಚಾರ್ಯ(77) ಗುರುವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೂಡುಬಿದರೆಯಿಂದ ಮುಂಬೈಗೆ ಬಸ್ಸುಗಳಿಳಿಲ್ಲದ ಕಾಲದಲ್ಲಿ ಕಾರು ಮೂಲಕ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದರು. ಮಂಗಳೂರಿನ ಕೆನರಾ ಜ್ಯುವೆಲ್ಲರ್ಸ್, ಪಾಲ್ಕೆ ಜ್ಯುವೆಲ್ಲರ್ಸ್ಗಳಲ್ಲಿ ಕಾರು ಚಾಲಕರಾಗಿ ಹಲವು ವರ್ಷಗಳ ಕಾಲ ವೃತ್ತಿ ನಡೆಸಿದ್ದ ಅವರು ಬಳಿಕ ಮೂಡುಬಿದರೆಯಲ್ಲಿ ಸ್ವಂತ ಕಾರು ಚಾಲಕರಾಗಿ ದುಡಿಯುತ್ತಿದ್ದರು. 40 ವರ್ಷಗಳ ವೃತ್ತಿ ಜೀವನದಲ್ಲಿ ಅಪಘಾತ ರಹಿತ ಚಾಲಕರಾಗಿದ್ದ ಅವರಿಗೆ ಹಲವು ಸಂಘ ಸಂಸ್ಥೆಗಳು ಅಪಘಾತ ರಹಿತ ಕಾರು ಚಾಲಕನೆಂಬ ಪ್ರಶಸ್ತಿ ನೀಡಿ ಗೌರವಿಸಿದ್ದರು. ಅವರಿಗೆ ಪತ್ನಿ ನಾಲ್ಕು ಮಂದಿ ಪುತ್ರರು ನಾಲ್ಕು ಮಂದಿ ಪುತ್ರಿಯರು ಇದ್ದಾರೆ.
mbd_april16_5

By Suddi9

Leave a Reply

Your email address will not be published. Required fields are marked *