ಮೂಡುಬಿದರೆ: ಇನ್ನೋವಾ ಕಾರೊಂದು ಗೂಡ್ಸ್ ಟೆಂಪೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಟೆಂಪೋ ರಿಕ್ಷಾದಲ್ಲಿದ್ದ ಪ್ರಯಾಣಿಕನೋರ್ವ ಮೃತಪಟ್ಟ ಘಟನೆ ಮೂಡುಬಿದರೆ ಸಮೀಪದ ಬನ್ನಡ್ಕ ಕ್ರಾಸ್ನಲ್ಲಿ ಬುಧವಾರ ಸಂಭವಿಸಿದೆ.

mbd_april15_9 (1)

mbd_april15_9 (2)
ಮಾರ್ಪಾಡಿ ಗ್ರಾಮದ ಕಾಪುವಿನ ಅಶೋಕ ಪೂಜಾರಿ (43ವ) ಎಂಬವರು ಮೃತಪಟ್ಟ ದುರ್ಧೇವಿ. ಅಶೋಕ್ ಅವರು ಮೂಡುಬಿದಿರೆಯ ಕೃಷ್ಣಪ್ಪ ದೇವಾಡಿಗ ಬಳಗದ ಉದ್ಯಮದಲ್ಲಿ ಕಾರ್ಮಿಕನಾಗಿ ಕಳೆದ ಕೆಲವು ವರ್ಷಗಳಿಂದ ದುಡಿಯುತ್ತಿದ್ದರು. ಬುಧವಾರದಂದು ಅವರು ಗೂಡ್ಸ್ ಟೆಂಪೋ ರಿಕ್ಷಾದಲ್ಲಿ ಮೂಡೆಉಬಿದಿರೆಯಿಂದ ಪಡುಮಾರ್ನಾಡಿನ ಅಮನೊಟ್ಟುವಿಗೆ ಕಬ್ಬು ನ್ನು ಲೈನ್ ಸೇಲ್ಗೆ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕಾರ್ಕಳದಿಂದ ಮೂಡುಬಿದರೆ ಕಡೆಗೆ ಅತೀ ವೇಗದಿಂದ ಬರುತ್ತಿದ್ದ ಇನ್ನೋವಾ ಕಾರು ಡಿಕ್ಕಿ ಹೊಡೆದಿದ್ದು ಈ ಸಂದರ್ಭ ಟೆಂಪೋ ರಿಕ್ಷಾ ಪಕ್ಕದಲ್ಲೇ ಇದ್ದ ಬಸ್ಸು ತಂಗುದಾಣಕ್ಕೆ ಡಿಕ್ಕಿ ಹೊಡೆದು ಅದರಲ್ಲಿದ್ದ ಅಶೋಕ್ ಅವರಿಗೇ ತೀವೃವಾಗಿ ಗಾಯಗಳಾಗಿದ್ದು ತಕ್ಷಣ ಅವರನ್ನು ಮೂಡುಬಿದರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಚಾಲಕನಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಶೋಕ್ ಅವರ ಕುಟುಂಬ ಬಡತನದಲ್ಲಿದ್ದು ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂಡುಬಿದರೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

By Suddi9

Leave a Reply

Your email address will not be published. Required fields are marked *