ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್. ಲೋಬೊ ರವರು ಇಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಪಿಲಿಕುಳ ನಿಸರ್ಗಧಾಮದಲ್ಲಿ ಆಗುತ್ತಿರುವ ಪ್ರಗತಿ ಕಾಮಗಾರಿಗಳನ್ನು ಪರಿಶೀಲಿಸಿದರು. ಅವರೊಂದಿಗೆ ಕಾರ್ಯನಿವರ್ಾಹಕ ನಿದರ್ೇಶಕರಾದ ಪ್ರಭಾಕರ್ ಶರ್ಮ, ಮೂಡಾ ಆಯುಕ್ತರಾದ ಮುಹಮ್ಮದ್ ನಝೀರ್, ಪಿಲಿಕುಳ ನಿಸರ್ಗಧಾಮದ ವಿವಿಧ ವಿಭಾಗದ ಅಧಿಕಾರಿಗಳು ಜತೆಗಿದ್ದರು.

IMG_5208

IMG_5226
ಮಾಧ್ಯಮದೊಂದಿಗೆ ಜೆ.ಆರ್. ಲೋಬೊ ಮಾತನಾಡಿ ಟ್ಯೂರಿಸಂ ಡೆಸ್ಟಿನೇಷನ್ ಡೆವಲಪ್ಮೆಂಟ್ ಪ್ರಾಜೆಕ್ಟ್ (ಖಿಠಣಡಿಟ ಆಜಣಟಿಚಿಣಠಟಿ ಆಜತಜಟಠಠಿಟಜಟಿಣ ಕಡಿಠರಿಜಛಿಣ, ಉಠತಜಡಿಟಿಟಜಟಿಣ ಠಜಿ ಟಿಜಚಿ) ವತಿಯಿಂದ ಬಿಡುಗಡೆಗೊಂಡ ಪ್ರಥಮ ಹಂತದ 1.25 ಕೋಟಿ ವೆಚ್ಚದ ಪ್ರವೇಶದ್ವಾರದ ಕೆಲಸ ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ. ಪ್ರವೇಶದ್ವಾರದಲ್ಲಿ ಟಿಕೇಟ್ ಕೌಂಟರ್, ಲಾಕರ್ ರೂಮ್, ವಿಶ್ರಾಂತಿ ಕೊಠಡಿ ಮುಂತಾದ ಸೌಲಭ್ಯಗಳು ಇರುತ್ತದೆ. ಹಾಗೂ ಹತ್ತಿರದಲ್ಲೇ 400 ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ಪ್ರವೇಶ ದ್ವಾರದಿಂದ ಮೃಗಾಲಯದ ಮುಖಾಂತರ ಆಡಳಿತ ಕಛೇರಿ ತನಕ ರಸ್ತೆಯನ್ನು ಅಭಿವೃದ್ಧಿಪಡಿಸಿ, ಪಾದಚಾರಿಗಳಿಗೆ ಫೂಟ್ಪಾತ್ ಮತ್ತು ಪಶ್ಚಿಮ ಘಟ್ಟದ ಪರಿಕಲ್ಪನೆಯಲ್ಲಿ ಗಿಡಗಳನ್ನು ಬೆಳೆಸಲಾಗುವುದು.
ಕೆರೆ ಅಭಿವೃದ್ಧಿ
ಮೃಗಾಲಯದ ಮುಂದೆ ಇರುವ ಖಾಲಿ ಜಾಗದಲ್ಲಿ ಕೆರೆಯನ್ನು ಕೃತಕ ರೂಪದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಸುಮಾರು 0.30 ಲಕ್ಷ ವೆಚ್ಚದಲ್ಲಿ ಕೆರೆ ನಿಮರ್ಾಣ ಕೆಲಸವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಾಡಲಾಗುವುದು. ಕೆರೆಯ ನಾಲ್ಕು ಸುತ್ತಲೂ ಸಸಿಗಳನ್ನು ನೆಟ್ಟು ಉತ್ತಮ ವಾತಾವರಣ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.
ಲೀಡ್ ಗಾರ್ಡನ್ ಪ್ರಾಜೆಕ್ಟ್
ಕೇಂದ್ರ ಸರಕಾರದಿಂದ ಪಶ್ಚಿಮ ಘಟ್ಟದ ಪರಿಕಲ್ಪನೆಯಲ್ಲಿ ಗಿಡಮರಗಳನ್ನು ಬೆಳೆಸಲು ಮತ್ತು ಪಿಲಿಕುಳದ ಅಭಿವೃದ್ಧಿ ಕೆಲಸಕ್ಕೆ 144 ಲಕ್ಷ ರೂಪಾಯಿಗಳ ಅನುದಾನವು ದೊರಕುವ ನಿರೀಕ್ಷೆಯಲ್ಲಿದೆ. ಈ ಮೊತ್ತವನ್ನು ಈಗಿರುವ 40 ವಿವಿಧ ತಳಿಯ 2500 ಔಷಧಿ ಗುಣವುಳ್ಳ ಸಸಿಗಳನ್ನು ಮತ್ತು 50 ತಳಿಯ 230 ಅಪರೂಪದ ಮತ್ತು ನಶಿಸಿಹೋಗುತ್ತಿರುವ ಸಸಿಗಳನ್ನು ನಿರ್ವಹಣೆ ಮಾಡಲು ಮತ್ತು ಹೆಚ್ಚಿನ ಗಿಡಗಳನ್ನು ನೆಡಲು ಈ ಅನುದಾನವನ್ನು ವಿನಿಯೋಗಿಸಲಾಗುವುದು. ಹಾಗೂ ಮೆಡಿಸಿನಲ್ ಪ್ಲಾಂಟ್ ಬೋಡರ್ು ಮತ್ತು ಎನ್ಎಂಪಿಟಿ ಯವರಿಂದ ಇನ್ನೂ ಹೆಚ್ಚಿನ ಅನುದಾನವನ್ನು ಕೇಳಲಾಗುವುದು.
3ಡಿ ಪ್ಲಾನೆಟೋರಿಯಂ
3ಡಿ ಪ್ಲಾನೆಟೋರಿಯಂ ಕೆಲಸವನ್ನು ಪರಿಶೀಲಿಸಿದ ಶಾಸಕರು ಶೇಕಡಾ 60 ರಷ್ಟು ಕೆಲಸವು ಪೂರ್ಣಗೊಂಡಿರುತ್ತದೆ. ವಿಜ್ಞಾನ ಸಾಮಾಗ್ರಿಗಳಿಗೆ ಟೆಂಡರನ್ನು ಕರೆಯಲಾಗುವುದು. ಇನ್ನೂ ಒಂದು ವರ್ಷದಲ್ಲಿ ಕೆಲಸ ಪೂರ್ಣಗೊಳ್ಳುವುದು ಎಂದರು.

By suddi9

Leave a Reply

Your email address will not be published. Required fields are marked *