7 ಜೀವಂತ 4 ಬಲಿ ಪಡೆದ ದನ ವಶಕ್ಕೆ
ಉಳ್ಳಾಲ; ಚೆಂಬುಗುಡ್ಡೆ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು 7 ಜೀವಂತ ಜಾನುವಾರು ಮತ್ತು ನಾಲ್ಕು ಕಡಿದು ಹಾಕಿದ ದನದ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ವೇಳೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.
ಚೆಂಬುಗುಡ್ಡೆ ನಿವಾಸಿಗಳಾದ ಎಂ.ಸಿ.ಬಾವಾ, ಆತನ ಸಹೋದರ ಎಂ.ಸಿ.ಖಾದರ್ ಮತ್ತೆ ಈರ್ವರು ಸ್ಥಳದಿಂದ ಪರಾರಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಭಾನುವಾರ ಬೆಳಿಗ್ಗೆ ಉಳ್ಳಾಲ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳಿಬ್ಬರು ಕಸಾಯಿಖಾನೆಯೊಳಗೆ ನಾಲ್ಕು ಜಾನುವಾರುಗಳನ್ನು ಕಡಿದು ಮಾಂಸ ಮಾಡುತ್ತಿದ್ದರೆ, ಇನ್ನಿಬ್ಬರು ಸ್ಕೂಟರುಗಳಲ್ಲಿ ಅದನ್ನು ಸರಬರಾಜು ಮಾಡಲು ಹೊರಟಿದ್ದರು ಎಂದು ತಿಳಿದುಬಂದಿದೆ. ಪೊಲೀಸ್ ದಾಳಿ ವೇಳೆ ಸ್ಕೂಟರಿನಲ್ಲಿದ್ದವರು ವಾಹನಗಳನ್ನು ಕೆಳಕ್ಕುರುಳಿಸಿ ಮತ್ತೆ ಇಬ್ಬರು ಕಂಪೌಂಡ್ ಹಾರಿ ಪರಾರಿಯಾಗಿದ್ದಾರೆ.

ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು: ನ.14 ರಂದು ಚೆಂಬುಗುಡ್ಡೆ ಕಸಾಯಿಖಾನೆಗೆ ಪೊಲೀಸರು ದಾಳಿ ನಡೆಸಿ ಕ್ವಿಂಟಾಲ್ ರಷ್ಟು ದನದ ಮಾಂಸ ವಶಕ್ಕೆ ಪಡೆದುಕೊಂಡಿದ್ದರು. ದಾಳಿ ನಡೆದ ಕೆಲವೇ ವಾರಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಬಳಿಕ ಮತ್ತೆ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ಆರೋಪಿಗಳು ಮತ್ತೆ ವ್ಯವಹಾರವನ್ನು ಬೃಹತ್ ಮಟ್ಟಿನಲ್ಲಿ ನಡೆಸಲು ಆರಂಭಿಸಿದ್ದಾರೆ. ಎಂ.ಸಿ ಬಾವಾ ನೇತೃತ್ವದಲ್ಲಿ ಹಲವು ವರ್ಷಗಳಿಂದ ಅಕ್ರಮ ಕಸಾಯಿಖಾನೆ ನಡೆಯುತ್ತಿದ್ದು, ಪೊಲೀಸರು ದಾಳಿ ನಡೆಸಿ ಬಂಧಿಸಿದ ನಂತರ ಮತ್ತದೇ ವ್ಯವಹಾರದಲ್ಲಿ ತೊಡಗಿಕೊಂಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಅನ್ನುವ ಒತ್ತಾಯ ವ್ಯಕ್ತವಾಗಿದೆ.












