ಬಂಟ್ವಾಳ:ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಇದೇ 11ರಿಂದ ಮೊದಲ್ಗೊಂಡು 30ರತನಕ ರಾಜ್ಯದಾದ್ಯಂತ ‘ಜಾತಿಗಣತಿ’ ಸಮೀಕ್ಷೆ ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಸಮಸ್ತ ಗಾಣಿಗರು ತಮ್ಮ ಜಾತಿಯನ್ನು ‘ಗಾಣಿಗ’ ಜಾತಿಯಲ್ಲಿ ಐದು ಉಪ ಜಾತಿಯಿದ್ದು   ಇದನ್ನು  ‘ಸಪಳಿಗ’ ಎಂದು ನಮೂದಿಸಲು ಗಣತಿದಾರರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಇದೇ ವೇಳೆ ಮಾತೃಭಾಷೆಯನ್ನು ತುಳು ಎಂದು ನಮೂದಿಸುವಂತೆ ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *