ಮೂಡುಬಿದರೆ: ಅಶ್ವತ್ಥಪುರ ಸೀತಾರಾಮಚಂದ್ರ ದೇವಸ್ಥಾನದ ಕುಂಭಾಭಿಷೇಕ ಬ್ರಹ್ಮಕಲಶೋತ್ಸವ ಹಾಗೂ ದೇವಸ್ಥಾನದ ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಬುಧವಾರ ಸಂಜೆ ಹೊರಕಾಣಿಕೆ ಸಮರ್ಪಿಸಲಾಯಿತು.
ಸಂಪಿಗೆ-ಪುತ್ತಿಗೆ ದೇವಸ್ಥಾನ- ಅಲಂಗಾರು ಮಾರ್ಗವಾಗಿ ಮೂಡುಬಿದರೆ ತಲುಪಿ ಪುನಃ ಸಂಪಿಗೆ ಮೂಲಕ ಅಶ್ವತ್ಥಪುರಕ್ಕೆ ಹೊರಕಾಣಿಕೆ ಮೆರವಣಿಗೆ ಸಾಗಿತು. ಇನ್ನೊಂದು ಹೊರಕಾಣಿಕೆ ಮೆರವಣಿ ನಿರ್ಕೇರೆ-ಸಂತೆಕಟ್ಟೆಯಾಗಿ ದೇವಸ್ಥಾನದವರೆಗೆ ನಡೆಯಿತು.
mbd_april8_4
ಶತಮಾನೋತ್ಸವ ಪ್ರಧಾನ ಸಮಿತಿ ಗೌರವಾಧ್ಯಕ್ಷ ಶ್ರೀನಿವಾಸ್ ರಾವ್ ಕೊಪ್ಲು, ಕಾರ್ಯಾಧ್ಯಕ್ಷ ಪಿ.ಎನ್ ರಾಜಾರಾಮ್ ಪಂಡ್ರಮಜಲು, ಗೌರವ ಉಪಾಧ್ಯಕ್ಷ ಉಮೇಶ್ ಬೋಂಟಡ್ಕರ್, ಪ್ರಧಾನ ಕಾರ್ಯದರ್ಶಿ ಎಂ.ಸಿ ಭಾಸ್ಕರ್, ಜೊತೆ ಕಾರ್ಯದರ್ಶಿ ಡಾ.ಪಿ.ಎಸ್ ಸುರೇಶ್ ಬಾಬು, ದಾವಣಗೆರೆ, ಕೋಶಾಧಿಕಾರಿ ಮುದ್ರಬೆಟ್ಟು ರಾಮಚಂದ್ರ ರಾವ್ , ಕಾರ್ಯಕಾರಿ ಸಮಿತಿ ಸದಸ್ಯ ವೆ.ಮೂ.ಪ್ರಭಾಕರ್‍ಭಟ್, ವಂಟಿಮಾರು ಅಂಬರೀಶ್ ರಾವ್, ನಾಗೇಶ್ ತಾವರೆ, ಕೆ.ಶಿವಶಂಕರ ಮಾಯಣ, ಸುನೀಲ್ ಮುದ್ರಬೆಟ್ಟು ಹಾಗೂ ಅರುಣ್ ಕುಮಾರ್ ಕೊಪ್ಲು, ರಘುನಾಥ್ ಭಟ್ ವಂಟಿಮಾರ್ ಮೊದಲಾದವರಿದ್ದರು.
ಬುಧವಾರ ಉಗ್ರಾಣ ಪೂಜೆ, ಮಹಾಪೂಜೆ ನಡೆಯಿತು ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮದ ಅಶ್ವತ್ಥಪುರ ಎ.ಕೆ.ಉಮಾನಾಥ ಬಳಗದಿಂದ ನಾದಸ್ವರ ವಾದನ ನಡೆಯಿತು.
ಇಂದಿನ ಕಾರ್ಯಕ್ರಮ: ದೇವಸ್ಥಾನದ ಉತ್ಸವದ ಪ್ರಯುಕ್ತ ಶ್ರೀ ಗಣಪತಿ ಅರ್ಥವಶೀರ್ಷ ಹೋಮ, ಶ್ರೀರಾಮತಾರಕ ಹೋಮ ಪ್ರಾರಂಭ, ರಾಮಾಯಣ ಪಾರಾಯಣ, ಚತುರ್ವೇದ ಪಾರಾಯಣ,ರಾಮತಾರಕ ಮಂತ್ರ ಜಪ, ಶ್ರೀಸೀತಾರಾಮಚಂದ್ರ ದೇವರಿಗೆ ಲಕ್ಷ ತುಳಸೀ ಆರ್ಚನೆ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಚಂದನ ಸತ್ಯದರ್ಶನ ಖ್ಯಾತಿಯ ಡಾ.ಪಾವಗಡ ಪ್ರಕಾಶ್ ರಾವ್ ಅವರಿಂದ `ರಾಮಾಯಣ ಮಹತ್ವದ-ತಾತ್ವಿಕ ಸಿದ್ಧಾಂತ’ ಪ್ರವಚನವಿದೆ. ಬೆಳಿಗ್ಗೆ 11.30 ಅಥರ್ವಶೀರ್ಷ ಹೋಮ ಪೂರ್ಣಾಹುತಿ, 12.30ಕ್ಕೆ ಮಹಾಪೂಜೆ, 6ಗಂಟೆಗೆ ನವಚಂಡೀ ಪಾರಾಯಣ, ದೀಪಾರಾಧನೆ, ಅಷ್ಟಾವಾಧನ, ರಾತ್ರಿ 8.30 ಭಜನಾ ಕಾರ್ಯಕ್ರಮವಿದೆ. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಗಿರಿಧರ ಉಡುಪ ಹಾಗೂ ತಂಡದವರಿಂದ ಪಕ್ಕವಾದ್ಯಮೇಳ ಕಾರ್ಯಕ್ರಮವಿದೆ.

By suddi9

Leave a Reply

Your email address will not be published. Required fields are marked *