ಮೂಡುಬಿದಿರೆ:ಅಶ್ವತ್ಥಪುರ ಶ್ರೀಸೀತಾರಾಮಚಂದ್ರ ದೇವಸ್ಥಾನದ ಶತಮಾನೋತ್ಸವ ಸಂಭ್ರಮವನ್ನು ಬುಧವಾರ ರಾತ್ರಿ ಚಾಲನೆ ನೀಡಲಾಯಿತು.
ಶ್ರೀಕ್ಷೇತ್ರ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ಚಾಲನೆ ನೀಡಿ ಆಶೀವರ್ಚನ ನೀಡಿದರು. ಹಿರಿಯರಿಗೆ ನೀಡುವ ಗೌರವ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಸೂಚಿಸುತ್ತದೆ. ನಮ್ಮೊಳಗಿರುವ ಆದರ್ಶ ಧಾರ್ಮಿಕ ಅಭಿವೃದ್ಧಿಗೆ ಪೂರಕವಾಗಿರಬೇಕು. ಸಾಂಘಿಕ ಪ್ರಾರ್ಥನೆ, ಭಕ್ತಿ ಪರವಶತೆಯಿಂದ ದೇವರ ಅನುಗ್ರಹ ಸಿಗುತ್ತದೆ. ಭಕ್ತಿ ಎಲ್ಲಿರುತ್ತದೋ ಅಲ್ಲಿ ಶಕ್ತಿ ಇರುತ್ತದೆ. ಶಕ್ತಿ ಇರುವಲ್ಲಿ ದೇವರ ಸಾಮೀಪ್ಯವಿರುತ್ತದೆ ಎಂದು ಹೇಳಿದರು.
ಶಂಕರ ವೇದಿಕೆ ಹಾಗೂ ಶಾರದ ಸಭಾಂಗಣವನ್ನು ಇದೇ ಸಂದರ್ಭದಲ್ಲಿ ಅವರು ಲೋಕಾರ್ಪಣೆಗೊಳಿಸಲಾಯಿತು.
ಮೂಡುಬಿದರೆ ಚೌಟರ ಅರಮನೆಯ ಕುಲದೀಪ್.ಎಂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.mbd_april8_5

ಆಡಳಿತ ಮೊಕ್ತೇಸರ ಬಿ.ಎಂ ರಾಮಕೃಷ್ಣ ರಾವ್ ಅಧ್ಯಕ್ಷತೆವಹಿಸಿದ್ದರು. ಅಶ್ವತ್ಥಪುರ ದೇವಸ್ಥಾನದ ಆಡಳಿತ ಮಾಜಿ ಮೊಕ್ತೇಸರರಾದ ಅಶ್ವತ್ಥಾಮ ಭಟ್, ಬಿ.ಎಂ ರಾಮಕೃಷ್ಣ ರಾವ್, ಡಾ.ಪಿ.ಎನ್ ಲಕ್ಷ್ಮಣ ರಾವ್, ಎ.ಜಗನ್ನಾಥ ರಾವ್ ಮಂಗಳೂರು, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಶ್ರೀನಿವಾಸ್ ರಾವ್ ಕೊಪ್ಲು, ಕೋಶಾಧಿಕಾರಿ ಮುದ್ರೆಬೆಟ್ಟು ರಾಮಚಂದ್ರ, ಆಡಳಿತ ಮಂಡಳಿ ಸದಸ್ಯರಾದ ಸುರೇಶ್ ತಾವರೆ, ವಂಟಿಮಾರು ಅಂಬರೀಶ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಎಂ.ಸಿ ಭಾಸ್ಕರ್ ಸ್ವಾಗತಿಸಿದರು. ಶ್ರೀಕಂಠ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಕಿರಣ್ ಮಂಜನಬೈಲು ವಂದಿಸಿದರು.

By suddi9

Leave a Reply

Your email address will not be published. Required fields are marked *