ಸುದ್ದಿ9 ಕೈಕಂಬ:ಶಾಸ್ತವು ಶ್ರೀ ಭೂತನಾಥೇಶ್ವರ ದೇವಸ್ಥಾನ ಮತ್ತು ಶಾಸ್ತವು ಶ್ರೀ ದೇವರ ಮೂಲಸ್ಥಾನ ದೇವರಗುಡ್ಡೆಯಲ್ಲಿ ಬ್ರಹ್ಮಕಲಶಾಭಿಷೇಕ ಮಹೋತ್ಸವ ಹಾಗೂ 49ನೇ ವರ್ಷದ ಭಜನಾ ಮಂಗಲೋತ್ಸವವು ಎ.15ರಿಂದ 23ರ ವರೆಗೆ ನಡೆಯಲಿದೆ.

ಶ್ರೀ ಭೂತನಾಥೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕ ಹಾಗೂ 49ನೇ ವರ್ಷದ ಭಜನಾ ಮಂಗಲೋತ್ಸವವು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಪರಮಪೂಜ್ಯ ಡಾ.ಡಿ.ವಿರೇಂದ್ರ ಹೆಗ್ಗಡೆಯವರ ಶುಭ ಆರ್ಶಿರ್ವಾದ ಹಾಗೂ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಉಡುಪಿ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ ಶ್ರೀ ಗುರುದೇವಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯ ಆಶೀರ್ವಚನದೊಂದಿಗೆ ನಡೆಯಲಿದೆ.ರಾತ್ರಿ 7.30ರಿಂದ ಸ್ಥಳೀಯ ಮಕ್ಕಳಿಂದ ನೃತ್ಯ ಮನೋರಂಜನಾ ಕಾರ್ಯಕ್ರಮ, 9.30ರಿಂದ ಬಲೆತೆಲಿಪಾಲೆ ಖ್ಯಾತಿಯ ಸಂದೀಪ್ ಶೆಟ್ಟಿ ಮಾಣಿಬೆಟ್ಟು ಮತ್ತು ಪ್ರಸನ್ನ ಶೆಟ್ಟಿ ಬೈಲೂರು ನಟಿಸಿರುವ ಹಾಸ್ಯಮಯ ನಾಟಕ “ದುಂಬು ಪಿರ” ನಾಟಕ, ಶನಿವಾರ ರಾತ್ರಿ 8ರಿಂದ ಸನಾತನ ನಾಟ್ಯಾಲಯದವರಿಂದ “ನೃತ್ಯ ವೈಭವ, ರಾತ್ರಿ 10.30ಕ್ಕೆ ಹವ್ಯಾಸಿ ಬಳಗ ಕದ್ರಿ (ರಿ) ಮಂಗಳೂರು ಹಾಗೂ ಸುಪ್ರಸಿದ್ಧ ಅತಿಥಿ ಕಲಾವಿದರಿಂದ ಶ್ರೀ ಕುಳಾಯಿ ಮಾಧವ ಭಂಡಾರಿ ವಿರಚಿತ ತುಳು ಹಾಸ್ಯಮಯ ಯಕ್ಷಗಾನ “ಅಬ್ಬರದ ಬಬ್ಬರಿಯೆ”, 22ರಂದು ಬುಧವಾರ ಬೆಳಗ್ಗೆ 9.30-10.30 ರವರೆಗೆ ರಾಜ್ಯ ಪ್ರಶಸ್ತಿ ಪುರಸ್ಕ್ರತ ಕಸ್ತೂರಿಯವರಿಂದ “ಭಕ್ತಿಗಾನಸುಧೆ”, ಬೆಳಿಗ್ಗೆ 10.30-12 ಬಲೆತೆಲಿಪಾಲೆ ಖ್ಯಾತಿಯ ದೀಪಕ್ ರೈ ಮತ್ತು ತಂಡದವರಿಂದ ಹಾಸ್ಯ ಕಾರ್ಯಕ್ರಮ, ಮಧ್ಯಾಹ್ನ 12ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಹ್ನ 2ರಿಂದ 4ರವರೆಗೆ ಡ್ಯಾನ್ಸಿಂಗ್ ಸ್ಟಾರ್ ತಂಡದವರಿಂದ ನೃತ್ಯ ಕಾರ್ಯಕ್ರಮ, ಸಂಜೆ 4ರಿಂದ ಬಲೆತೆಲಿಪಾಲೆ ಖ್ಯಾತಿಯ ಉಮೇಶ್ ಮಿಜಾರ್ ನಟಿಸಿರುವ ತುಳು ಹಾಸ್ಯಮಯ ನಾಟಕ “ಅಪುಜಿ ಪಂಡ ದೀಪುಜಿ” ನಾಟಕ ಮುಂತಾದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ.
