- ಮೂಡುಬಿದಿರೆ: ತಾನು ಫ್ಯಾಶನ್ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದರೂ, ವೈದ್ಯಕೀಯ ಕ್ಷೇತ್ರದಲ್ಲಿ ಶಿಕ್ಷಣವನ್ನು ಮುಗಿಸಿ ವೃತ್ತಿಯನ್ನು ಮುಂದುವರಿಸುತ್ತೇನೆ. ಆದರೆ ಫ್ಯಾಶನ್ ಕ್ಷೇತ್ರವನ್ನು ತಾನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾರೆ ಎಂದು ಎಂದು ಫೆಮಿನಾ ಮಿಸ್ ಇಂಡಿಯಾ ಇಂಟರ್ನ್ಯಾಶನಲ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದ ಮಂಗಳೂರಿನ ಆಫ್ರೀನ್ ಆರ್.ವಾಸ್ ಹೇಳಿದರು.
- .
ಫ್ಯಾಶನ್ ಕ್ಷೇತ್ರವನ್ನು ವಾಣಿಜ್ಯಕ್ಕೆ ಬಳಸಲಾರೆ : ಮಿಸ್ ಇಂಡಿಯಾ ಆಫ್ರೀನ್




* ಅಲಂಗಾರಿನಲ್ಲಿ ಮಿಸ್ ಇಂಡಿಯಾ ಆಫ್ರೀನ್ ಅವರನ್ನು ಸನ್ಮಾನಿಸಲಾಯಿತು.



ಮೂಡುಬಿದಿರೆ ಅಲಂಗಾರಿನ ಪಂಡಿತ್ ರೆಸಾರ್ಟ್ ವತಿಯಿಂದ ಸೋಮವಾರ ನಡೆದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಯುವಜನ ಸೇವೆ ಮತ್ತು ಮೀನುಗಾರಿಕೆ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಆಫ್ರೀನ್ ಸಾಧನೆ ರಾಜ್ಯಕ್ಕೆ ಸಂದ ಗೌರವ. ಮಂಗಳೂರಿನಲ್ಲಿ ನಡೆಯುವ ರಾಷ್ಟ್ರೀಯ ಫೆಡರೇಶನ್ ಕ್ರೀಡಾಕೂಟದ ಸಂದರ್ಭ ರಾಜ್ಯ ಸರ್ಕಾರ ಪರವಾಗಿ ಅವರನ್ನು ಗೌರವಿಸುತ್ತೇವೆ ಎಂದರು.
ಮೂಡುಬಿದಿರೆ ಅಲಂಗಾರು ಹೋಲಿ ರೋಸರಿ ಚರ್ಚ್ ಧರ್ಮಗುರು ರೆ.ಫಾ ಬೇಸಿಲ್ ವಾಸ್ ಆಶೀವರ್ಚನ ನೀಡಿದರು.
ಬಿಜೆಪಿ ಮುಖಂಡ ಕೆ.ಪಿ ಜಗದೀಶ್ ಅಧಿಕಾರಿ, ರೆಸಾರ್ಟ್ ಮುಖ್ಯಸ್ಥೆ ರೂಬಿ ಅಗರ್ ವಾಲ್, ಪ್ರಾಮೋಟರ್ ಲಾಲ್ ಗೋಯಲ್, ಫ್ಯಾಶನ್ ಎಬಿಸಿಡಿ ಸಂಸ್ಥೆಯ ಡಾ.ನಿತಿನ್, ಚರಣ್ ಉದ್ಯಮಿ ಅಬು ಅಲಾ ಪುತ್ತಿಗೆ ಉಪಸ್ಥಿತರಿದ್ದರು. ರೀಟಾ ಹಾಗೂ ಎಲ್ಸಿ ನಿರೂಪಿಸಿದರು.
- ಎರಡು ತಿಂಗಳ ಹಿಂದೆ ಆರೋಗ್ಯದ ಬಗ್ಗೆ ಕಿರುಚಿತ್ರ ನಿರ್ಮಾಣದ ವೇಳೆ ಚೆನೈಗೆ ತೆರಳಿದಾಗ ಈ ಅವಕಾಶ ಬಂದಿದ್ದು, ಮುಂದೆ ಅದಕ್ಕೆ ಪೂರಕವಾದ ತಯಾರಿ ನಡೆಸಿದೆ. ತನ್ನ ಈ ಸಾಧನೆ ಖುಷಿ ತಂದಿದೆ ಎಂದ ಅವರು ಇದೀಗ ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದ್ದೇನೆ ಎಂದು ಅಫ್ರೀನಾ ಹೇಳಿದರು.
