- ಬಂಟ್ವಾಳ: ದೇಶದಲ್ಲಿ ಬಡವರು ಮತ್ತು ದುರ್ಬಲ ಜನರ ಜೊತೆಗೆ ಕೃಷಿಕರ ಬದುಕನ್ನು ಹಸನಾಗಿಸಲು ಹಸಿರು ಕ್ರಾಂತಿ ಮೂಲಕ ಗುರುತಿಸಿಕೊಂಡಿದ್ದ ಮಾಜಿ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಕನಸು ಎಂದೆಂದಿಗೂ ಪ್ರಸ್ತುತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಬಾಬು ಜಗಜೀವನ್ ರಾಮ್ ಅವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಎಸ್.ವಿ.ಎಸ್ ಕಾಲೇಜು ಉಪನ್ಯಾಸಕ ನಾರಾಯಣ ಭಂಡಾರಿ ಉಪನ್ಯಾಸ ನೀಡಿದರು. ತಾ.ಪಂ.ಅಧ್ಯಕ್ಷ ಯಶವಂತ ಡಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಪುರಂದರ ಹೆಗ್ಡೆ , ತಾ.ಪಂ ಸದಸ್ಯ ಆನಂದ ಶಂಭೂರು, ತಾ.ಪಂ.ನಿರ್ದೇಶಕಿ ದಯಾವತಿ, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಉಪತಹಶೀಲ್ದಾರ್ ರೋಹಿನಾಥ್, ಪರಮೆಶ್ವರ ನಾಯ್ಕ್, ಕಂದಾಯ ನಿರೀಕ್ಷಕ ಸಾಧು ಮತ್ತಿತರರು ಇದ್ದರು.
ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಅಧಿಕಾರಿ ರೆಡ್ಡಿ ನಾಯ್ಕ ಸ್ವಾಗತಿಸಿ, ಮೇಲ್ವಿಚಾರಕ ಕೃಷ್ಣಪ್ಪ ಗೌಡ ವಂದಿಸಿದರು. ರಂಗನಿರ್ದೇಶಕ ಮಂಜು ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು.
