ಉಳ್ಳಾಲ:ದಕ್ಷಿಣ ಭಾರತದ ಅಜ್ಮೀರ್ ಎಂದೇ ಹೆಸರುಗಳಿಸಿದ ಉಳ್ಳಾಲ ದರ್ಗಾದಲ್ಲಿ ಪ್ರತೀ ಐದು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಖುತುಬುಝ್ಜಮಾನ್ ಹಝ್ರತ್ ಅಸೈಯ್ಯದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ತಂಙಳ್‍ರ 423ನೆ ವಾರ್ಷಿಕ ಮತ್ತು 20ನೆ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ಗುರುವಾರ ರಾತ್ರಿ ಅಸೈಯ್ಯದ್ ಮುಹಮ್ಮದ್ ಉಮರುಲ್ ಫಾರೂ ತಂಙಳ್ ಪೊಸೋಟು ಸಂಭ್ರಮದ ಚಾಲನೆ ನೀಡಿದರು.ಉರೂಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ಖಾಝಿ ಅಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ದುಆ ಮಾಡಿದರು.
001

1

002

2

003

004

3

006

4

005

6

008

011

014

012

013

018

015

016

888

019

777
ಮುಖ್ಯ ಭಾಷಣ ಮಾಡಿದ ಅಖಿಲ ಭಾರತ ಸುನ್ನೀ ಜಂ ಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್‍ರವರು,ಉಳ್ಳಾಲ ಖಾಝಿಯಾಗಿದ್ದ ತಾಜುಲ್ ಉಲಮಾ ಅವರ ನೇತೃತ್ವದಲ್ಲಿ ನೂರಾರು ಮಸೀದಿಗಳು ನಿರ್ಮಾಣ ಆಗಿವೆ. ಅವರು ಬರುವ ಮೊದಲು ಮಸೀದಿಗಳ ಕೊರತೆ ಇತ್ತು. ಅವರು ಉಳ್ಳಾಲಕ್ಕೆ ಬಂದ ಬಳಿಕ ನೂರಾರು ಮದ್ರಸ , ಮಸೀದಿಗಳು ನಿರ್ಮಾಣ ಅವರ ನೇತೃತ್ವದಲ್ಲೇ ನಡೆಯಲು ಇಲ್ಲಿ ಅಂತ್ಯವಿಶ್ರಮಿಸುತ್ತಿರುವ ಸೆಯ್ಯದ್ ಮುಹಮ್ಮದ್ ಶರೀಫುಲ್ ಮದನಿಯವರ ಪವಾಢವೇ ಕಾರಣ ಎಂದು ಹೇಳಿದರು.
ಪವಾಢ ಪುರುಷರನ್ನು, ಗುರುಗಳನ್ನು ಗೌರವಿಸುವವರಿಗೆ ಅಲ್ಲಾಹನಲ್ಲಿ ವಿಶ್ವಾಸವಿಟ್ಟವರಿಗೆ ರಕ್ಷಣೆ ಇದೆ. ರಾಜ್ಯದ ಮುಖ್ಯಮಂತ್ರಿಯಾಗಲೀ, ಕೇಂದ್ರದ ಮುಖ್ಯಮಂತ್ರಿಯಾಗಲೀ ಅವರು ಆ ಸ್ಥಾನದಲ್ಲಿ ಮುಂದುವರಿಯಲು ಅವರಿಗೆ ವಿಶ್ವಾಸ, ನಂಬಿಕೆ ಇದ್ದರೆ ಮಾತ್ರ ಸಾಧ್ಯ. ಮಾನವ ಕುಲವನ್ನು ಅವಹೇಳನ ಮಾಡುವುದು, ತಳಮಟ್ಟದಲ್ಲಿ ನೋಡುವುದು, ಹಿಯಾಳಿಸುವುದು ಸಲ್ಲದು. ಇದಕ್ಕೆ ಇಸ್ಲಾಂ ಅವಕಾಶ ನೀಡಿಲ್ಲ. ಮುಸ್ಲಿಂ ಸಮುದಾಯ ಅನ್ಯ ದರ್ಮದ ಜತೆ ಐಕ್ಯತೆಯಿಂದ ಬೆರೆತು ಇಸ್ಲಾಂನ ಚೌಕಟ್ಟು ಮೀರದ ರೀತಿಯಲ್ಲಿ ಜೀವನ ಸಾಗಿಸಬೇಕೆಂದು ಕರೆ ನೀಡಿದರು.
ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹೀಂ, ಆರೋಗ್ಯ ಸಚಿವ ಯು.ಟಿ. ಖಾದರ್ ಅತಿಥಿಗಳಾಗಿ ಭಾಗವಹಿಸಿದ್ದರು.
ಅಖಿಲ ಭಾರತ ಸುನ್ನೀ ಜಂ ಇಯ್ಯತುಲ್ ಉಲಮಾದ ಉಪಾಧ್ಯಕ್ಷರಾದ ಶೈಖುನಾ ಕನ್ಜುಲ್ ಉಲಮಾ ಹಂಝ ಮುಸ್ಲಿಯಾರ್ ಚಿತ್ತಾರಿ, ಅಸೈಯ್ಯದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಮದನಿ ಕೊೈಲಾಂಡಿ, ಅಸೈಯ್ಯದ್ ಅಥಾವುಲ್ಲಾ ತಂಙಳ್ ಉದ್ಯಾವರ, ಎಸ್‍ಎಂಎ ಕಾಲೇಜಿನ ಪ್ರೊಫೆಸರ್‍ಗಳಾದ ಶೈಖುನಾ ಚೆರುಕುಂಞÂ ಮುಸ್ಲಿಯಾರ್, ಶೈಖುನಾ ಅಹ್ಮದ್ ಬಾವ ಮುಸ್ಲಿಯಾರ್, ಮಂಜನಾಡಿ ಅಲ್ ಮದೀನಾ ಅಧ್ಯಕ್ಷ ಶೈಖುನಾ ಅಬ್ಬಾಸ್ ಮುಸ್ಲಿಯಾರ್, ದಾರುಲ್ ಇರ್ಶಾದ್‍ನ ಅಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಅಬ್ದುಲ್ ರಝಾಕ್ ಮದನಿ ಅಕ್ಕರಂಗಡಿ, ಇಬ್ರಾಹೀಂ ಮದನಿ ಮಂಚಿ, ಸೈಯ್ಯದ್ ಜಮಲುಲ್ಲೈಲಿ ತಂಙಳ್ ಕಾಜೂರು, ಅಸೈಯ್ಯದ್ ಅಶ್ರಫ್ ತಂಙಳ್ ಆದೂರು, ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್‍ಕಟ್ಟೆ, ಹುಸೈನ್ ಸಅದಿ ಕೆ.ಸಿ.ರೋಡ್, ಅಬ್ದುಲ್ ಖಾದರ್ ಮದನಿ ಪಳ್ಳಂಗೋಡು, ಯೆನೆಪೊಯ ವಿ.ವಿ. ಕುಲಪತಿ ವೈ. ಅಬ್ದುಲ್ಲ ಕುಂಞÂ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಬಿ.ಎಂ.ಇಬ್ರಾಹೀಂ ಬಾವಾ ಹಾಜಿ, ಮುಡಾ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಅಬೂಬಕರ್ ಹಾಜಿ ಕೂರತ್, ಹೈದರ್ ಪರ್ತಿಪ್ಪಾಡಿ, ಎಸ್. ಅಬ್ದುರ್ರಹ್ಮಾನ್ ಎಂಜಿನಿಯರ್, ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಹಾಜಿ ಸಿ. ಅಬ್ದುಲ್ ಮಜೀದ್, ಎಸ್‍ಕೆ ಅಬ್ದುಲ್ ಮಜೀದ್ ಹಾಜಿ, ಅಬೂಬಕರ್ ಸಜಿಪ, ಮನ್ಸೂರ್ ಹಾಜಿ ಅಝಾದ್ ಅತಿಥಿಗಳಾಗಿ ಪಾಲ್ಗೊಡಿದ್ದರು.
ದಅïವಾ ಕಾಲೇಜಿನ ವಿದ್ಯಾರ್ಥಿ ಮುದಸ್ಸಿರ್ ಕೆ.ಸಿ.ರೋಡ್ ಕಿರಾಅತ್ ಪಠಿಸಿದರು. ದರ್ಗಾ ಅಧ್ಯಕ್ಷ ಹಾಜಿ ಯು.ಎಸ್. ಹಂಝ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಯು.ಟಿ ಇಲ್ಯಾಸ್ ವಂದಿಸಿದರು.
ವೇದಿಕೆಯಲ್ಲಿ ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್‍ವೇ, ಜತೆ ಕಾರ್ಯದರ್ಶಿ ಹಾಜಿ ಮೊಹಮ್ಮದ್ ಅಶ್ರಫ್, ಫಾರೂಕ್ ಮಾರ್ಗತಲೆ, ಕೋಶಾಧಿಕಾರಿ ಮೊಹಮ್ಮದ್ ಹಾಜಿ,ಲೆಕ್ಕಪರಿಶೋಧಕ ಜೆ. ಅಬ್ದುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *