ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಪುರಸಭಾ ವ್ಯಾಪ್ತಿಯ ಭಂಡಾರಿಬೆಟ್ಟು ನಿವಾಸಿ ರಾಮ ಸಪಲ್ಯ(74) ಇವರು ಅಸೌಖ್ಯದಿಂದ ಬುಧವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮಂಗಳೂರು ಮನಪಾ ಸದಸ್ಯ ಪ್ರಕಾಶ್ ಮತ್ತು ಮೂವರು ಪುತ್ರಿಯರು ಇದ್ದಾರೆ.
ಮೃತರು ಬಿ.ಸಿ.ರೋಡ್ನ ಹೆಂಚು ಕಾರ್ಖಾನೆಯೊಂದರ ನಿವೃತ್ತ ಸಿಬ್ಬಂದಿಯಾಗಿದ್ದು, ಸರಳತೆ ಜೀವನ ನಡೆಸಿದ್ದರು. ಮೃತರ ಅಂತ್ಯಕ್ರಿಯೆ ಸ್ಥಳೀಯ ಬಡ್ಡಕಟ್ಟೆ ಸಾರ್ವಜನಿಕ ಸ್ಮಶಾನದಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು.

