ಬಂಟ್ವಾಳ:ಇಲ್ಲಿನ ಪುರಸಭೆಯ ಆಡಳಿತ ಪಕ್ಷದ ಸದಸ್ಯರೊಳಾಗಿನ ಶೀತಲ ಸಮರ ಸಿ.ಸಿ.ಟಿ.ವಿಯ ಧ್ವನಿಮುದ್ರಿತ ಸಿ.ಡಿ ನೀಡುವ ವಿಚಾರದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮತ್ತೊಮ್ಮೆ ಸ್ಫೋಟಗೊಂಡಿತ್ತು.
ಸದಸ್ಯ ಪ್ರವೀಣ್ ಬಿಯವರು ಫೆ23ರಂದು ನಡೆದ ಸಾಮಾನ್ಯ ಸಭೆಯ ಕಲಾಪದ ಸಿ.ಸಿ.ಟಿ.ವಿಯ ಧ್ವನಿಮುದ್ರಿತ ಸಿಡಿಯನ್ನು ಒದಗಿಸುವಂತೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಸಭೆಯಲ್ಲಿ ಪ್ರಸ್ತಾಪಗೊಂಡು ಆಡಳಿತ ಪಕ್ಷದ ಕಾಂಗ್ರೇಸ್ ಸದಸ್ಯರಲ್ಲೇ ಪದ ವಿರೋಧ ವ್ಯಕ್ತವಾಯಿತು.
Purasabhe

9
ಧ್ವನಿ ಮುದ್ರಿತ ಸಿಡಿಯನ್ನು ಸದಸ್ಯರಿಗೆ ಕೊಟ್ಟಲ್ಲಿ ಅದನ್ನೇ ಹಿಡಿದುಕೊಂಡು ದುರುಪಯೋಗ ಪಡಿಸುವುದು ಇಲ್ಲವೇ ಅಧಿಕಾರಿಗಳನ್ನೇ ಬ್ಲ್ಯಾಕ್ ಮೇಲ್ ಮಾಡುವ ಸಾಧ್ಯತೆಯು ಇರುವುದರಿಂದ ಸಿ.ಡಿಯನ್ನು ಯಾವುದೇ ಕಾರಣಕ್ಕೂ ಕೊಡಲಾಗುವುದಿಲ್ಲ ಎಂದು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋರವರು ಖಡಕ್ಕಾಗಿ ಸಭೆಯ ಗಮನಕ್ಕೆ ತಂದರು.
ಮುಖ್ಯಾಧಿಕಾರಿಯವರ ಉತ್ತರದಿಂದ ಅಸಮಾಧಾನಿತರಾದ ಕಾಂಗ್ರೇಸ್ ಸದಸ್ಯರುಗಳಾದ ಮಹಮ್ಮದ್ ನಂದರಬೆಟ್ಟು, ಗಂಗಾಧರ, ಜಗದೀಶ್ ಕುಂದರ್ ಸಿ.ಡಿಯನ್ನು ಸದಸ್ಯರಿಗೆ ನೀಡಬೇಕೆಂದು ಪಟ್ಟುಹಿಡಿದರು. ಜೆಡಿಎಸ್ ಸದಸ್ಯ ಬಿ.ಮೋಹನ್ ಕೂಡ ಇವರನ್ನು ಬೆಂಬಲಿಸಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರಾದ ಸದಾಶಿವ ಬಂಗೇರ,ಮಹಮ್ಮದ್ ಶರೀಫ್,ರಾಮಕೃಷ್ಣ ಆಳ್ವ, ವಾಸುಪೂಜಾರಿಯವರ ಸಹಿತ ಬಿಜೆಪಿ ಸದಸ್ಯರು ಸಿ.ಡಿಯನ್ನು ನೀಡಲೇಬಾರದೆಂದು ವಾದಿಸಿದರು. ಇದರಿಂದ ಸಭೆಗೊಂದಲದ ಗೂಡಾಯಿತು.
ಸಿ.ಡಿಗಾಗಿ ಆಡಳಿತ ಪಕ್ಷದ ಸದಸ್ಯರೊಳಗಿನ ವಾಕ್ಸಮರವನ್ನು ವಿಪಕ್ಷ ಸದಸ್ಯರು ನೋಡಿ ಮುಸಿ ಮುಸಿ ನಕ್ಕು ಸುಮ್ಮನಾದರು. ಕೊನೆಗೆ ಈ ಪ್ರಸ್ತಾಪವನ್ನು ಮತಕ್ಕೆ ಹಾಕಿದಾಗ ಸದಸ್ಯರಾದ ಮಹಮ್ಮದ್ ನಂದರಬೆಟ್ಟು, ಗಂಗಾಧರ,ಜಗದೀಶ್,ಬಿ.ಮೋಹನ್,ಹೊರತು ಪಡಿಸಿ ಉಳಿದೆಲ್ಲಾ ಸದಸ್ಯರು ಸಿ.ಡಿ ಕೊಡಲೇಬಾರದೆಂಬ ನಿರ್ಣಯದ ಪರವಾಗಿ ಕೈ ಎತ್ತಿದರು. ಇದರಿಂದ ಈ ನಾಲ್ವರು ಸದಸ್ಯರು ಮುಖಭಂಗಕೊಳ್ಳಗಾದರು.

By suddi9

Leave a Reply

Your email address will not be published. Required fields are marked *