ಪ. ಬಂಗಾಳ: ಜನರಿಗೆ ಮತದಾನದ ಕುರಿತು ಎಷ್ಟು ಜಾಗೃತಿ ಮೂಡಿಸಿದರೂ ಶೇಕಡಾ 60ಕ್ಕಿಂತ ಹೆಚ್ಚು ಮತದಾನವಾಗುವುದು ಅಷ್ಟರಲ್ಲೇ ಇದೆ. ಅವಿದ್ಯಾವಂತರು, ಕೂಲಿ ಕಾರ್ಮಿಕರಾದರೂ ಮತ ಚಲಾಯಿಸಲು ಬೂತ್ ಗಳಿಗೆ ಆಗಮಿಸುತ್ತಾರೆ. ಆದರೆ ಶ್ರೀಮಂತ ಮತ್ತು ಅರೆ ಶ್ರೀಮಂತ ಜನರಿದ್ದಾರಲ್ಲಾ ಅವರಿಗೆ ಮತದಾನದ ದಿನ ಕೇವಲ ಒಂದು ರಜೆಯ ದಿನವಾಗಿದೆಯಷ್ಟೇ. ಈ ಮಾನಸಿಕತೆಯನ್ನು ಹೋಗಲಾಡಿಸಲು ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ಹೊಸ ಉಪಾಯವೊಂದನ್ನು ಮಾಡಿದ್ದಾರೆ.

ಶಾಪಿಂಗ್ ಮಾಲ್ ಗಳಲ್ಲಿ , ಕಾಂಪ್ಲೆಕ್ಸ್ ಗಳಲ್ಲಿ ಡಿಸ್ಕೌಂಟ್ ಇದೆಯೆಂದಾದರೆ ತಮಗೆ ಬೇಡದ ವಸ್ತುವನ್ನು ಖರೀದಿಸಲೂ ಹಿಂಜರಿಯದ ಜನರಿದ್ದಾರೆ. ಇದೇ ಫಾರ್ಮುಲಾವನ್ನು ಅಪ್ಲೈ ಮಾಡಲು ಮುಂದಾಗಿರುವ ಅಧಿಕಾರಿಗಳು ಮತದಾನ ಮಾಡಿದ ಶಾಯಿಯ ಗುರುತನ್ನು ತೋರಿಸಿ ಬರ್ಧಮಾನ್ ಮತ್ತು ಆಸುಪಾಸಿನಲ್ಲಿರುವ ಶಾಪಿಂಗ್ ಮಾಲ್ ಮತ್ತು ಕಾಂಪ್ಲೆಕ್ಸ್ ಗಳಲ್ಲಿ ಆಯ್ದ ವಸ್ತುಗಳ ಮೇಲೆ ಶೇಕಡಾ 5ರಿಂದ 10ರಷ್ಟು ರಿಯಾಯಿತಿ ಪಡೆಯಿರಿ ಎಂದು ಜನರಿಗೆ ಸೂಚಿಸಿದ್ದಾರೆ. ಈ ಯೋಜನೆ ಯಶಸ್ವಿಯಾದರೆ ಪ್ರಾಯಶಃ ಮುಂದಿನ ಚುನಾವಣೆಯಲ್ಲಿ ದೇಶದೆಲ್ಲೆಡೆ ಇದೇ ಫಾರ್ಮುಲಾವನ್ನು ಬಳಸಬಹುದು.
