ಮೂಡುಬಿದರೆ: ಪಡುಮಾರ್ನಾಡು ಗ್ರಾ.ಪಂ ವ್ಯಾಪ್ತಿಯ ಅಚ್ಚರಕಟ್ಟೆ ಪ್ರಾಥಮಿಕ ಶಾಲೆಗೆ ಜೇಸಿಐ ತ್ರಿಭುವನ್ ಮೂಡುಬಿರೆ ಇದರ ವತಿಯಿಂದ ರೂ.25 ಸಾವಿರ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಶೌಚಗೃಹಕ್ಕೆ ಕಾಮಗಾರಿಗೆ ಜೇಸಿಐ ಕಾರ್ಯನಿರ್ವಾಹಕ ರಾಷ್ಟ್ರೀಯ ಉಪಾಧ್ಯಕ್ಷ ಎಸ್.ಆರ್ ಅರುಣ್ ಚಾಲನೆ ನೀಡಿದರು.
mbd_march30_1
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅರುಣ್ ಅವರು ,ಜೇಸಿಐ ಕ್ಲಬ್ ನೂರು ವರ್ಷದ ಆಚರಣೆಯನ್ನು ಆಚರಿಸುತ್ತಿದ್ದು ಈ ನಿಟ್ಟಿನಲ್ಲಿ ನೂರು ಶೌಚಾಲಯಗಳನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದ್ದೇವೆ. ಮೂಡುಬಿದರೆ ಜೇಸಿಐ ಕ್ಲಬ್‍ನ ಸಹಕಾರದೊಂದಿಗೆ ಅಚ್ಚರಕಟ್ಟೆ ಶಾಲೆಗೆ ಕೊಡುಗೆಯನ್ನು ನೀಡಲಾಗಿದೆ. ಉತ್ಸಾಹಿ ಯುವಕರನ್ನು ಮತ್ತು ಹಿರಿಯರನ್ನು ಒಳಗೊಂಡ ಮೂಡುಬಿದರೆಯ ಜೇಸಿಐ ಉತ್ತಮ ಕಾರ್ಯಚಟುವಟಿಕೆಯೊಂದಿಗೆ ಸಮಾಜದ ಕಟ್ಟಕಡೆಯ ಜನರನ್ನು ಗುರುತಿಸಿ ಸೌಲಭ್ಯಗಳನ್ನು ಒದಗಿಸುತ್ತಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯ ಎಂದು ಮೂಡುಬಿದಿರೆ ಜೇಸಿಐ ಕ್ಲಬ್‍ನ್ನು ಪ್ರಶಂಸಿಸಿದರು.
ವಲಯ ಅಧ್ಯಕ್ಷ ಜೇಸಿ ಕೃಷ್ಣ ಮೋಹನ. ಪಿ ಎಸ್, ಉಪಾಧ್ಯಕ್ಷ ಅನಿಲ್ ಕುಮಾರ್, ವಲಯ ಅಧಿಕಾರಿಗಳಾದ ಮಂಗೇಶ್ ಶ್ಯಾನ್‍ಭೋಗ್, ಸುಜಿತ್ ಕಡಬ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೂಡುಬಿದಿರೆ ಜೇಸಿಐನ ಕೋಶಾಧಿಕಾರಿ ಅಬ್ದುಲ್ ಹಮೀದ್ ಸದಸ್ಯರುಗಳಾದ ಹಸ್ದುಲ್ಲಾ ಇಸ್ಮಾಯಿಲ್, ಸಿ.ಹೆಚ್ ಗಫೂರ್, ಆಶಿತ್, ಸುನಿಲ್ ಜೈನ್, ಮರ್‍ಝೂಕ್ ಅಬ್ಬಾಸ್, ಕಾರ್ಯಕ್ರಮ ನಿದೇರ್ಶಕ ಜೇಸಿ ಅಶ್ರಫ್, ಶಾಲೆಯ ಮುಖ್ಯ ಶಿಕ್ಷಕಿ ಯೋಗಿನಿ ಮತ್ತು ಎಸ್‍ಡಿಎಂಸಿ ಅಧ್ಯಕ್ಷ ಪಾಂಡು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜೇಸಿಐ ತ್ರಿಭುವನ್ ಮೂಡುಬಿದಿರೆಯ ಅಧ್ಯಕ್ಷ ಧೀರೇಂದ್ರ ಬಲ್ಲಾಳ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *