ಮೂಡುಬಿದರೆ: ವಾಟ್ಸ್ಆಪ್ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ನಿಂದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲ್ಲಿಕಾರಿನ ರಾಜು ಪೂಜಾರಿ ಎಂಬವರ ವಿರುದ್ಧ ಮೂಡುಬಿದರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಾವಿನಿಂದ ಆಘಾತಗೊಂಡ ಸಿದ್ಧರಾಮಯ್ಯ ಆಸ್ಪತ್ರೆಯಲ್ಲಿ ಸಾವು ಹಲವು ಗಣ್ಯರ ಸಂತಾಪ’ ಎಂಬ ಬರಹವುಳ್ಳ ನಿಂದನಾತ್ಮಕ ಸಂದೇಶವನ್ನು ಪ್ರವೀಣ್ ಕುಮಾರ್ ಎಂಬವರಿಂದ ಬಂದ ವಾಟ್ಸ್ಆಪ್ ಸಂದೇಶವನ್ನು ರಾಜು ಪೂಜಾರಿಯವರು ಸ್ನೇಹಿತರಿಗೆ ಕಳುಹಿಸಿದ್ದರು. ಈ ಕುರಿತು ಕಾಂಗ್ರೆಸ್ ಕಾರ್ಯಕರ್ತ ಸುಂದರ್ ಸಿ. ಪೂಜಾರಿ ಮೂಡುಬಿದರೆ ಪೊಲೀಸರಿಗೆ ದೂರು ನೀಡಿದ್ದರು

By suddi9

Leave a Reply

Your email address will not be published. Required fields are marked *