ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನಾವೂರು ಗ್ರಾ.ಪಂ.ವ್ಯಾಪ್ತಿಯ ಅಲ್ಲಿಪಾದೆ-ವಗ್ಗ ಕೂಡುರಸ್ತೆ ಡಾಂಬರೀಕರಣವಿಲ್ಲದೆ ಇದ್ದ ಜೆಲ್ಲಿಯೂ ರಸ್ತೆಯುದ್ದಕ್ಕೂ ಹರಡಿಕೊಂಡು ವಾಹನ ಸಂಚಾರಕ್ಕೆ ಭಾರೀ ತೊಡಕಾಗಿದೆ.
27btl-road
ಈ ರಸ್ತೆಯು ಕುಟ್ಟಿಕಳ, ನೂರ್ತಾಡಿ, ಪೆರಿಯಾರ್‍ದೋಟ ಹೀಗೆ ಮೂರು ಕಿ.ಮೀ. ಸಾಗಿದ ಬಳಿಕ ವಗ್ಗಕ್ಕೆ ಸೇರುತ್ತದೆ. ಇಲ್ಲಿನ ಪೆರಿಯಾರ್‍ದೋಟ- ವಗ್ಗ ರಸ್ತೆಯು ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರೂ 25 ಲಕ್ಷ ವೆಚ್ಚದಲ್ಲಿ ಮರು ಡಾಂಬರೀಕರಣಗೊಂಡಿದೆ. ಆದರೆ ಅಲ್ಲಿಪಾದೆ -ಪೆರಿಯಾರ್‍ದೋಟ ರಸ್ತೆ ಮಾತ್ರ ಕಳೆದ 15 ವರ್ಷಗಳಿಂದ ಡಾಂಬರೀಕರಣಗೊಳ್ಳದೆ ಬಾಕಿಯಾಗಿದೆ ಎನ್ನುತ್ತಾರೆ ಸ್ಥಳೀಯರು. ಇದರಿಂದಾಗಿ ರಸ್ತೆಯುದ್ದಕ್ಕೂ ಡಾಂಬರು ಮತ್ತು ಜೆಲ್ಲಿ ಕಿತ್ತು ಹೋಗಿದ್ದು, ವಾಹನ ಸಂಚಾರಕ್ಕೆ ಭಾರೀ ಅಡ್ಡಿಯಾಗಿದೆ ಎನ್ನುತ್ತಾರೆ ಇಲ್ಲಿನ ವಾಹನ ಸವಾರರು.
ಪ್ರತಿಕ್ರಿಯೆ:
ಈ ರಸ್ತೆ ಸಂಪೂರ್ಣ ಡಾಂಬರೀಕರಣಕ್ಕೆ ರೂ 25 ಲಕ್ಷ ಮೊತ್ತದ ಅನುದಾನ ಅಗತ್ಯವಿದ್ದು, ಜಿ.ಪಂ.ನಿಂದ ಭರಿಸಲು ಅಸಾಧ್ಯವಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಂಸದರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸ್ಥಳೀಯ ಜಿ.ಪಂ.ಸದಸ್ಯೆ ಗಿರಿಜ ಪ್ರತಿಕ್ರಿಯಿಸಿದ್ದಾರೆ.

By Suddi9

Leave a Reply

Your email address will not be published. Required fields are marked *