ಸುದ್ದಿ9 ಕೈಕಂಬ:ಇಡೀ ಗ್ರಾಮವನ್ನು ಸ್ವಚ್ಚ ಗ್ರಾಮವನ್ನಾಗಿ ಪರಿವರ್ತಿಸುವ ದ್ರಷ್ಟಿಯಿಂದ ಬ್ರಹತ್ ಸ್ವಚ್ಚತಾ ಅಭಿಯಾನಕ್ಕೆ
ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ರಾಮಕ್ರಷ್ಣ ತಪೋವನದಲ್ಲಿ ಮಾ22ರಂದು ಭಾನುವಾರ ಚಾಲನೆ ದೊರೆತಿದೆ.  ರಾಮಕೃಷ್ಣ ಆಶ್ರಮದ ಸ್ವಾಮಿ ವಿವೇಕಚ್ಯತನ್ಯಾನಂದ ಅವರು ಈ ಸ್ವಚ್ಚತಾ ಅಭಿಯಾನದ ನೇತ್ರತ್ವ ವಹಿಸಿ ಈ ಅಭಿಯಾನವನ್ನು ಕೈಗೆತ್ತಿಕೊಂಡರು  ಆರಂಬಿಕ ಹಂತದಲ್ಲಿ ಕರಿಯಂಗಳ ಗ್ರಾಮವನ್ನು ಸಂಪೂರ್ಣ ಸ್ವಚ್ಚ ಗ್ರಾಮವನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ. ರಾಮಕೃಷ್ಣ ಆಶ್ರಮದಿಂದ ಹೊರಟ ಸ್ವಚ್ಚತಾ ಅಭಿಯಾನ ತಂಡವು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಮುಂಭಾಗ ತೆಂಗಿನಕಾಯಿಂದ ಕರ್ಪೂರದಾರತಿ ಬೆಳಗಿಸಿ ಕಾಯಿ ಹೊಡೆದು ದೇವಳದ ಮುಂಬಾಗವನ್ನು ಸ್ವಾಮಿ ವಿವೇಕಚ್ಯತನ್ಯಾನಂದ ಅವರು ಪೊರಕೆಹಿಡಿದು  ಗುಡಿಸುವ ಮೂಲಕ ಸ್ವಚ್ಚತೆಗೆ ಚಾಲನೆ ನೀಡಿದರು.
3

4

5

6

1

swachatha abhiyana

9

10

11

12

13

14
ದೇವಳದ ಸುತ್ತ ಮುತ್ತಲ ಪರಿಸರವನ್ನು ಸ್ವಚ್ಚತೆ ಮಾಡಲಾಯಿತು. ನಂತರ ಪ್ಲಾಸ್ಟಿಕ್, ತ್ಯಾಜ್ಯ,ಕಸಗಳನ್ನು ತೆಗೆದು ಕೈ ಗಾಡಿಗೆ ತುಂಬಿಸಿ ಪಡ್ಯಪು ಜಾಗಕ್ಕೆ ಹಾಕಲಾಯಿತು. ದೇವಳದ ಮುಂಬಾಗದ ಪ್ರಮಾಣ ಬಾವಿಯ ಸುತ್ತಲ ಗಿಡಗಂಟಿಗಳನ್ನು ತೆಗೆದು ಸರ್ವಮಂಗಳಾ ಹಾಲ್ ಹಿಂಬದಿಯ ಅಶ್ವತಾಕಟ್ಟೆಯನ್ನು ಸುಚಿಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಗ್ರಾಮದ ಬೂತ್ ಮಟ್ಟದಲ್ಲಿ ಸ್ವಚ್ಚತೆ ಮಾಡಲಾಗುವುದು ಕರಿಯಂಗಳ ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳೊಂದಿಗೆ ಸೇರಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆಗೆದು ನಿರ್ಧಿಷ್ಟ ಜಾಗದಲ್ಲಿ ಅದನ್ನು ಸುರಿಯಾಲಾಗುವುದು ಎಂದು ಸ್ವಾಮಿಜಿ ಯವರು ಹೇಳಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಹರಶ್ಚಂದ್ರ ಅವರು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಪೊಳಲಿ ವಿದ್ಯಾವಿಲಾಸ ಶಾಲೆಯ ಮಕ್ಕಳು ಶಿಕ್ಷಕ ಶಿಕ್ಷಕಿಯರು ಹಾಗೂ ರಾಮಕೃಷ್ಣ ತಪೋವನದ ಬಾಲಕಾಶ್ರಮದ ಮಕ್ಕಳು ಭಾಗವಹಿಸಿದ್ದರು. ಪೊಳಲಿ ರಾಜಶ್ರೀ ಯುವಕಮಂಡಲ, ಕೋರ್ದಬ್ಬು ಸೇವಾಸಮಿತಿ ಮಂಗಾಜೆ , ರಾಜೇಶ್ವರೀ ಮಹಿಳಾ ಮಂಡಲಿ ಪೊಳಲಿ , ಮಣಿಕಂಠಸೇವಾ ಸಮಿತಿ ಮಣಿಕಂಠಪುರ , ವಿಜಯಶ್ರೀ ಮಿತ್ರವೃಂದ ಕಲ್ಕುಟ , ಪಲ್ಲಿಪಾಡಿ ವಿಠೋಭ ಭಜನಾ ಮಂಡಳಿ ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.ಅಲ್ಲದೇ ದೇವಳಕ್ಕೆ ಬರುವ ಭಕ್ತಾಧಿಗಳು ಅಭಿಯಾನದಲ್ಲಿ  ಪಾಲ್ಗೋಂಡರು.

By suddi9

Leave a Reply

Your email address will not be published. Required fields are marked *