ಬಂಟ್ವಾಳ:ಬಂಟ್ವಾಳ ಪುರಸಭೆಯಲ್ಲಿ ಕಳೆದ ಎಂಟು ತಿಂಗಳ ಹಿಂದೆ ವಿಷಯಸೂಚಿಯಲ್ಲಿ ಇಡದೆ ಏಕಾಯೇಕಿ ರೂ 4ಕೋಟಿ ವೆಚ್ಚದ ಕ್ರಿಯಾಯೋಜನೆಗೆ ಅನುಮೋದನೆ ನೀಡಿ ಇದೀಗ ಟೆಂಡರ್ ಕರೆದು ತರಾತುರಿಯಲ್ಲಿ ಕಾಮಗಾರಿ ನಡೆಸಲು ಮುಂದಾಗಿರುವುದನ್ನು ಖಂಡಿಸಿ ವಿರೋಧಪಕ್ಷ (ಬಿಜೆಪಿ) ಸದಸ್ಯರು ಸೋಮವಾರ ದಿಡೀರ್ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತರಿಗೆ ದೂರಿಕೊಂಡಿದ್ದು, ಪ್ರಕರಣ ಲೋಕಾಯುಕ್ತರ ತನಿಖೆಯಲ್ಲಿದ್ದರೂ ತರಾತುರಿ ಕಾಮಗಾರಿ ನಡೆಸಲು ಮುಂದಾಗಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಟೀಕಿಸಿದರು.
ಸದಸ್ಯರಾದ ಎ.ಗೋವಿಂದ ಪ್ರಭು, ಬಿ.ದೇವದಾಸ ಶೆಟ್ಟಿ, ಭಾಸ್ಕರ ಟೈಲರ್, ಸುಗುಣಾ ಕಿಣಿ, ಸಂಧ್ಯಾ ನಾಯ್ಕ್ ಮತ್ತಿತರರು ಇದ್ದರು.
