ಮೂಡುಬಿದಿರೆ: ಡಾ.ಎಂ.ವಿ ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂ.ವಿ.ಶೆಟ್ಟಿ ಸ್ಪ್ಲಾಶ್-2015 ಕಾರ್ಯಕ್ರಮದ ಪ್ರಯುಕ್ತ ಚಿಕ್ಕಮಗಳೂರಿನ ಯಂಗ್ ಬ್ಲಡ್ಝ್ ತಂಡದವರಿಂದ ಬೈಕ್ ಸಾಹಸ ಕಾರ್ಯಕ್ರಮ ಗುರುವಾರ ನಡೆಯಿತು.
ಸಂಜೆ ಮಂಗಳೂರು ಡಿವೈಎಸ್ಪಿ ವಿನಯ್ ಗಾಂವ್ಕರ್ ವಿಶೇಷ ಬೈಕ್ ಸಾಹಸ ಪ್ರದರ್ಶನಕ್ಕೆ ಚಾಲನೆ ನೀಡಿದರು. ಹೆಲಿಕಾಪ್ಟರ್ ಕ್ಯಾಮರ ಮಾದರಿಯು 15 ಪ್ರದರ್ಶನ ನೀಡಿತು.


ಯಂಗ್ ಬ್ಲಡ್ಝ್ ಪೂರ್ಣ, ಯತೀಶ್, ಶಾದದ್, ಮಧು, ಬಿಲಾಲ್ ಸಾಹಸ ಪ್ರದರ್ಶನ ನೀಡಿದರು. ಸಂದೀಪ್ ಬಲ್ಲಾಳ್, ಕೀರ್ತನ್ ಪಾಶ್ಚತ್ಯ ಸಂಗೀತ ಪ್ರಸ್ತುತಪಡಿಸಿದರು. ಡಾ.ಎಂ.ವಿ ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಸಂದೀಪ್ ಜೆ.ನಾಯಕ್, ಕಾಲೇಜಿನ ಇಒ( ಇಸ್ಟೇಟ್ ಆಫೀಸರ್) ಅಕ್ಷಯ್ ಕುಮಾರ್ ಉಪಸ್ಥಿತರಿದ್ದರು.

