ಮೂಡುಬಿದರೆ: ವಾರ್ಷಿಕ ಸುಮಾರು 473 ಪ್ರಕಣಗಳು ಮಾತ್ರ ಮೇಲ್ಮನವಿಗೆ ಸಿಗುತ್ತಿದ್ದು ಈ ಸಂಖ್ಯೆ 600ಕ್ಕೆ ಏರಿದರೆ ಹಿರಿಯ ಸಿವಿಲ್ ಕೋರ್ಟ್ ಪೂರ್ಣಪ್ರಮಾಣದ ಕೋರ್ಟ್ ಆಗಿ ಕಾರ್ಯನಿರ್ವಹಿಸಲಿದೆ. ಅಲ್ಲಿಯವರೆಗೆ ತಾತ್ಕಾಲಿಕ ನೆಲೆಯಲ್ಲಿ ಕೋರ್ಟ್ ಕಾರ್ಯಾರಂಭಿಸಲಿದ್ದು ಶುಕ್ರವಾರ ಮತ್ತು ಶನಿವಾರ ಕಲಾಪಗಳು ನಡೆಯಲಿವೆ ಎಂದು ಹೈಕೋರ್ಟ್ನ ನ್ಯಾಯಾಧೀಶ ಹಾಗೂ ದ.ಕ. ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಎಂದು ಎ.ಎನ್ ವೇಣುಗೋಪಾಲ ಗೌಡ ಹೇಳಿದರು.
ಮೂಡುಬಿದರೆ ಕೋಟ್ ಅವರಣದಲ್ಲಿ ಸಂಚಾರಿ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವನ್ನು ಅವರು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೈಕೋರ್ಟ್ ನ್ಯಾಯಾಧೀಶ ಮೂಡುಬಿದರೆಯ ಅಬ್ದುಲ್ ನಝೀರ್ ನೂತನ ಕೋರ್ಟ್ ಕಟ್ಟಡ ಉದ್ಘಾಟನೆಗೊಂಡು 34 ದಿನಗಳ ಅಂತರದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮಂಜೂರಾಗಿರುವುದು ರಾಜ್ಯದಲ್ಲಿ ಹೋಬಳಿ ಕೇಂದ್ರವಾಗಿರುವ ಮೂಡುಬಿದರೆ ಹೊರತುಪಡಿಸಿ ಬೇರೆಲ್ಲೂ ಇಲ್ಲ ಎಂದರು.
ಉಡುಪಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಶಿವಶಂಕರ ಅಮರಣ್ಣ, ಮೂಡುಬಿದರೆ ಹಿರಿಯ ಸಿವಿಲ್ ನ್ಯಾಯಾಲಯದ ನಿಯೋಜಿತ ನ್ಯಾಯಾಧೀಶ ಮಲ್ಲಿಕಾರ್ಜುನ, ಕಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಸತೀಶ್ ಟಿ ಉಪಸ್ಥಿತರಿದ್ದರು.
ದ.ಕ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಉಮಾ ಎಂ.ಜಿ ಸ್ವಾಗತಿಸಿದರು. ಶ್ವೇತಾ ಕುಮಾರಿ ನಿರೂಪಿಸಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಆರ್ ಪಂಡಿತ್ ವಂದಿಸಿದರು.
