chopra

ಮುಂಬೈ: ಕಾಮಸೂತ್ರ 3ಡಿ ಸಿನಿಮಾದ ಮೂಲಕ ಬಾಲಿವುಡ್ ಗೆ ಕಾಲಿಟ್ಟಿರುವ ಮಾಡೆಲ್, ನಿರೂಪಕಿ, ನಟಿ ಹಾಗೂ ಇಂಟರ್ನೆಟ್ ನ ರಾಣಿ ಶೆರ್ಲಿನ್ ಚೋಪ್ರಾ ಕೆಟ್ಟ ನಿರ್ದೇಶಕರ ಜೊತೆ ಕೆಲಸ ಮಾಡಲು ಇಷ್ಟ ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾಳೆ. ಕೆಟ್ಟ, ದಿಟ್ಟ ಮತ್ತು ರಿಸ್ಕ್ ತೆಗೆದುಕೊಳ್ಳುವ ನಿರ್ದೇಶಕರೇ ನನ್ನ ಮೊದಲ ಆಯ್ಕೆ ಎಂದು ಚೋಪ್ರಾ ತಿಳಿಸಿದ್ದಾಳೆ. ಸದ್ಯ ಮಲಯಾಳಂನ ಬ್ಯಾಡ್ ಗರ್ಲ್ ಚಿತ್ರದಲ್ಲಿ ನಟಿಸುತ್ತಿರುವ ಶೆರ್ಲಿನ್ ಹಿಂದಿ ಮತ್ತು ಇಂಗ್ಲಿಷ್ ಚಿತ್ರದಲ್ಲೂ ನಟಿಸುತ್ತಿದ್ದಾಳೆ. ಬ್ಯಾಡ್ ಗರ್ಲ್ ಚಿತ್ರದಲ್ಲಿ ಒರ್ವ ಮಾಡೆಲ್ ಆಗಿ ಕಾಣಿಸಿಕೊಂಡಿರುವ ಚೋಪ್ರಾ ನೈಜ ಪ್ರೀತಿಗಾಗಿ ಪರದಾಡುವ ಪಾತ್ರವನ್ನು ನಿಭಾಯಿಸಿದ್ದಾಳೆ. ಹಾಡುಗಾರಿಕೆಯಲ್ಲೂ ತನ್ನ ಪ್ರತಿಭೆ ತೋರಿಸಿರುವ ಶೆರ್ಲಿನ್ ಒಂದು ಆಲ್ಬಂ ಕೂಡಾ ಹೊರತಂದಿದ್ದಾಳೆ. ಸದ್ಯ ಕೆಟ್ಟ ನಿರ್ದೇಶಕರೇ ನನ್ನ ಮೊದಲ ಆಯ್ಕೆ ಎಂದು ಹೇಳುವ ಮೂಲಕ ಸಭ್ಯ ನಿರ್ದೇಶಕರ ಕನಸಿಗೆ ನೀರೆರಚಿದ್ದಾಳೆ ಎಂಬುದು ಸದ್ಯದ ಸುದ್ದಿ.

By suddi9

Leave a Reply

Your email address will not be published. Required fields are marked *