ಮಂಗಳೂರು: ದ. ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ನಿ. ಮುಳಿಹಿತ್ಲು, ಮಂಗಳೂರು ಇದರ ವಜ್ರ ಮಹೋತ್ಸವದ ಅಂಗವಾಗಿ ದಿನಾಂಕ 1.3.2015ರಂದು ಮಲ್ಪೆ ಬೀಚ್‍ನಲ್ಲಿ ಆಯೋಜಿಸಿದ ಬೀಚ್ ಉತ್ಸವ 2015 ರಲ್ಲಿ ನಡೆದ 1,500 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಮಂಗಳೂರಿನ ನಿಖಿಲೇಶ್ ಎಂ. ಹೊಳ್ಳ ಪ್ರಥಮ ಬಹುಮಾನ ಗೆದ್ದು ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾನೆ.

nikhil
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆದ 2014-15ಸಾಲಿನ 17ರ ವಯೋಮಿತಿಯ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ನಿಖಿಲೇಶ್ 8 ಅಂಕವನ್ನು ಪಡೆಯುವುದರೊಂದಿಗೆ 3ನೇ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾನೆ. 2014 ಅಕ್ಟೋಬರ್‍ನಲ್ಲಿ ಜರುಗಿದ ರಾಜ್ಯಮಟ್ಟದ 200 ಮೀ ಫ್ರೀಸ್ಟೈಲ್ ಈಜುಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗಳಿಸಿದ ನಿಖಿಲೇಶ್ ಎಂ. ಹೊಳ್ಳ ಉರ್ವ ಕೆನರಾ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.

By suddi9

Leave a Reply

Your email address will not be published. Required fields are marked *