ಮಂಗಳೂರು : ಗ್ರಾಮೀಣ ಅಂಚೆ ಸೇವಕರನ್ನು ಖಾಯಂಗೊಳಿಸುವುದು ಮತ್ತು ಇಲಾಖಾ ನೌಕರರಿಗೆ ನೀಡುವ ಎಲ್ಲಾ ಸವಲತ್ತುಗಳನ್ನು ನೀಡುವುದು ಹಾಗೂ ೨೧-೦೨-೧೪ ರ ಒಪ್ಪಂದದಂತೆ ಗ್ರಾಮೀಣ ಅಂಚೆ ಸೇವಕರ ವೇತನ ಪರಿಷ್ಕರಣೆ ಮತ್ತು ಸೇವಾ ಷರತ್ತುಗಳನ್ನು ಪರಿಶೀಲಿಸಿಸಲು ನಾಯ್ಯಮೂರ್ತಿಗಳ ಸಮಿತಿ ರಚಿಸುವುದು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ ಮಾ.೧೦ ರಿಂದ ರಾಷ್ಟ್ರ ವ್ಯಾಪ್ತಿ ಮುಷ್ಕರ ನಡೆಸುತ್ತಿದೆ. ಮಾ.೧೨ ರಂದು ಬಲ್ಮಠದಲ್ಲಿ ಮಂಗಳೂರು ವಲಯ ಕಛೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.

ಸಂಘದ ಮಂಗಳೂರು ವಿಭಾಗದ ಅಧ್ಯಕ್ಷ ವಿಲಿಯಂ ಇ. ಲೋಬೋ, ವಿಭಾಗೀಯ ಕಾರ್ಯದರ್ಶಿ ಗಂಗಾಧರ ಪಚ್ಚನಾಡಿ, ಕೋಶಾಽಕಾರಿ ಹರೀಶ್ವರ ರಾವ್ ಸಹಿತ ೨೫೦ ಕ್ಕೂ ಮಿಕ್ಕಿ ಗ್ರಾಮೀಣ ಅಂಚೆ ಸೇವಕರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ. ಮಂಗಳೂರು ವಲಯ ಮಟ್ಟದ ೧೦೦ ಗ್ರಾಮೀಣ ಅಂಚೆ ಕಚೇರಿಗಳು ಮುಚ್ಚಿ ಗ್ರಾಮೀಣ ಅಂಚೆ ಸೇವೆ ವ್ಯತಯ ಗೊಂಡಿವೆ.

