ಬಂಟ್ವಾಳ: ಭಾರತೀಯರೇ…. ಮೋಸ ಹೋಗುವ(ಪುಸ್ತಕ) ಮುನ್ನ ಎಂದು ಬರೆದ ಬ್ಯಾನರೊಂದು ಕೋಮು ಸೂಕ್ಷ್ಮ ದ.ಕ.ಜಿಲ್ಲೆಯ ಅಲ್ಲಲ್ಲಿ ರಾರಾಜಿಸುತ್ತಿದ್ದು ಜಿಲ್ಲೆಯ ಜನರನ್ನು ನಿದ್ದೆಗೆಡಿಸಿದೆ. ಜಿಲ್ಲೆಯ ಪಟ್ಟಣಗಳ ಮುಖ್ಯ ಪೇಟೆಯಲ್ಲಿ ಈ ಬ್ಯಾನರಗಳನ್ನು ಹಾಕಲಾಗಿದ್ದು, ಇದಕ್ಕೆ ಸ್ಥಳೀಯ ಆಡಳಿತದ ಅನುಮತಿ ನೀಡಲಾಗಿದೆಯೋ ಅಥವಾ ಅನಧಿಕೃತವಾಗಿ ಬ್ಯಾನರಗಳನ್ನು ಹಾಕಲಾಗಿದೆಯೋ ಎನ್ನುವುದು ಗೊತ್ತಿಲ್ಲ. ಒಂದು ವೇಳೆ ಅನಧಿಕೃತವಾಗಿ ಈ ಬ್ಯಾನರ್ಗಳನ್ನು ಹಾಕಲಾಗಿದ್ದರೆ ವಿವಾದಿತ ಬ್ಯಾನರನ್ನು ಸ್ಥಳೀಯ ಆಡಳಿತ ಯಾಕೆ ಕಿತ್ತು ಹಾಕಿಲ್ಲ ಎನ್ನುವುದು ಕೂಡಾ ಇಲ್ಲಿ ಗಮನಾರ್ಹ ವಿಷಯ. ಈ ಬಗ್ಗೆ ಜಿಲ್ಲಾ ಪೋಲಿಸ್ ಕೂಡಾ ತಲೆಗೆಡಿಸಿಕೊಂಡಿದ್ದು ವಿವಾದಿತ ಬ್ಯಾನರನ ಹಿಂದೆ ಬಿದ್ದಿದೆ. ಅಷ್ಟಕ್ಕೂ ಈ ಬ್ಯಾನರನ್ನು ಯಾವ ಸಂಘಟನೆ ಹಾಕಿದೆ, ಯಾವ ಕಾರಣಕ್ಕಾಗಿ ಹಾಕಿದೆ, ಯಾರಿಗೋಸ್ಕರ ಮತ್ತು ಯಾರ ಪುಸ್ತಕ ಎನ್ನುವುದು ನಮೂದಾಗಿಲ್ಲ. ಈಗಾಗಿ ಇದು ಜಿಲ್ಲೆಯಲ್ಲಿ ಗಲಭೆ ಸೃಷ್ಟಿಸಲು ಯಾರೋ ಹುನ್ನಾರ ನಡೆಸಿದ್ದಾರೋ ಎನ್ನುವ ಸಂಶಯ ಸಾರ್ವಜನಿಕಾಗಿ ವ್ಯಕ್ತವಾಗಿದೆ.
ಈ ಬ್ಯಾನರ್ನಲ್ಲಿ ಕೆಂಪು ಅಕ್ಷರದಲ್ಲಿ ಬರೆಯಲಾಗಿದ್ದು, ಇದು ನಕ್ಸಲರು ಬರೆದು ಹಾಕಿದ್ದಾರೋ ಎನ್ನುವ ಬಗ್ಗೆ ಕೂಡಾ ಸಾರ್ವಜನಿಕರು ಮಾತಾನಾಡುತ್ತಿದ್ದಾರೆ. ಮಂಗಳೂರು ಮತ್ತು ಬಂಟ್ವಾಳದಲ್ಲಿ ಇವರ ಬಗ್ಗೆ ಅಷ್ಟೊಂದು ಹೆಸರು ಕೇಳಿ ಬರದ ಹಿನ್ನಲೆಯಲ್ಲಿ ಇದು ಅವರ ಕೆಲಸ ಅಲ್ಲ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಹಾಗಾಗಿ ಇದು ಜಿಲ್ಲೆಯಲ್ಲಿ ಗೊಂದಲ ಮೂಡಿದ್ದು ಜನರು ಭಯ ಬೀತರಾಗಿದ್ದಾರೆ. ಶಾಂತಿಯುತವಾಗಿ ಜೀವನ ನಡಸುವ ಜಿಲ್ಲೆಯ ಜನರ ಅಶಾಂತಿ ಕೆಡಿಸಿ ಜನಜೀವನ ಅಸ್ತವ್ಯಸ್ತ ಪಡಿಸಲು ಯಾರೋ ಆಶಾಂತಿ ಪ್ರಿಯರು ಈ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮೋದಲೇ ಕೋಮು ಸಂಘರ್ಷ ನಡೆಯುವ ಜಿಲ್ಲೆಯಲ್ಲಿ ಈ ರೀತಿಯ ವಿವಾದಿತ ಬ್ಯಾನರ್ ಹಾಕಲು ಅನುಮತಿ ನೀಡುವುದೇ ತಪ್ಪು. ಅನಧಿಕೃತವಾಗಿ ಹಾಕುವ ಬ್ಯಾನರ್ಗಳಿಗೆ ಸ್ಥಳೀಯ ಆಡಳಿತ ಅವಕಾಶ ನೀಡಬಾರದು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಬ್ಯಾನರ್ಗಳಿಂದಾಗಿಯೇ ಜಿಲ್ಲೆಯಲ್ಲಿ ಸಾಕಷ್ಟು ಗಲಭೆಗಳು ನಡೆಯುತ್ತಿದ್ದು, ಶಾಂತಿ ಕದಡುತ್ತದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಹಾಗಾಗಿ ಈ ವಿವಾದಿತ ಬ್ಯಾನರ್ನ್ನು ಹಾಕಿದವರನ್ನು ಜಿಲ್ಲಾ ಪೋಲಿಸ್ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಸಂದರ್ಭ ಜಿಲ್ಲೆಯಲ್ಲಿ ಶಾಂತಿಯನ್ನು ಕಾಪಾಡಲು ಅವಿರತ ಕೆಲಸ ಮಾಡಿದ ಜಿಲ್ಲೆಯ ಜನರಿಂದ ಶಹಬ್ಬಾಸ್ ಗಿರಿ ಪಟ್ಟವನ್ನು ಪಡೆದುಕೊಂಡ ಎಸ್ಪಿ ಶರಣಪ್ಪ ಈ ಬ್ಯಾನರ ಬಗ್ಗೆ ಇರುವ ಸಂಶಯ ನಿವಾರಣೆ ಮಾಡುತ್ತಾರೆ ಎನ್ನುವ ಗ್ಯಾರಂಟಿ ಇಲ್ಲಿಯ ಜನರಿಗಿದೆ. ಗದಗದಲ್ಲಿ ಈ ಹಿಂದೆ ಕೆಲಸ ಮಾಡಿ ಕಾನೂನು ಸುವ್ಯವಸ್ಥೆ ಕೆಲಸದಲ್ಲಿ ಚಾಣಾಕ್ಷ ಎನ್ನುವ ಬಗ್ಗೆ ಪ್ರಶಸ್ತಿ ಪಡೆದ ಎಸ್ಪಿ ಶರಣಪ್ಪ ಈ ವಿವಾಧಿತ ಬ್ಯಾನರನ ಬಗ್ಗೆ ಗೊಂದಲ ಸೃಷ್ಟಿಯಾಗುವ ಮೊದಲು ನಿವಾರಣೆ ಮಾಡುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

