ಸುದ್ದಿ9 ಕೈಕಂಬ: ದನುಪೂಜೆ ಕೆಳಗಿನ ಕಮ್ಮಾಜೆಯಿಂದ ಕಾವೇಶ್ವರ ದೇವಸ್ಥಾನದ ಕೂಡು ರಸ್ಥೆಗೆ ಪುದು ಜಿಲ್ಲಾಪಂಚಾಯತ್ ಸದಸ್ಯೆ ಜಯಶ್ರೀ ಕೆ.ಎ ಅವರ 5 ಲಕ್ಷದ ಅನುದಾನದಿಂದ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪ್ರಾದೇಶಾಭಿವೃದ್ಧಿ ನಿಧಿಯಿಂದ 3ಲಕ್ಷ ಅನುಧಾನದಿಂದ ಕಾಕ್ರೀಟಿಕರಣಕ್ಕೆ ಪುದು ಜಿಲ್ಲಾ ಪಂ.ಸದಸ್ಯೆ ಜಯಶ್ರೀ ಕೆ.ಎ ಅವರು ಮಾ. 6ರಂದು ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.

ಹಲವಾರು ವರ್ಷದಿಂದ ಈ ಭಾಗದ ಜನರಿಗೆ ಮೂಲಭೂತ ಸೌಕರ್ಯ ರಸ್ಥೆ ಸಂಪರ್ಕವಿಲ್ಲದೆ ವಂಚಿತರಾಗಿದ್ದು ಜನರು ಸುಮರು ಮೈಲು ದೂರದವರೆಗೆ ನಡೆದುಕೊಂಡು ಹೋಗಬೇಕಾಗಿತ್ತು.ಈ ಭಾಗದ ಗ್ರಾ. ಪಂ. ಸದಸ್ಯ ಮಾಜಿ ಅಧ್ಯಕ್ಷ ಕಮಾಲಾಕ್ಷ ಪೂಜಾರಿ ಅವರ ಸತತ ಪ್ರಯತ್ನದಲ್ಲಿ ಇಲ್ಲಿಯ ಸ್ಥಳಧಾನಿಗಳಿಂದ ಬಹುದಿನದ ಬೇಡಿಕೆ ಈಡೇರಿದಂತಾಯಿತು. ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸಿದ ಅವರು ಇನ್ನು ಮುಂದೆಯು ನಾನು ಯಾವಾಗಲು ನಿಮ್ಮೊಂದಿಗೆ ಇದ್ದೇನೆ ಎಂದು ಜನರಿಗೆ ಭರವಸೆ ನೀಡಿದರು.

6
1

2

3

4

5

 

7

8
ಈ ಸಂದರ್ಭದಲ್ಲಿ ಬಡಗಬೆಳ್ಳೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಕಮಾಲಾಕ್ಷ ಪೂಜಾರಿ, ತೆಂಕಬೆಳ್ಳೂರು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಯಶೋಧರ,ಕಾರ್ಯದರ್ಶಿ ಉಸ್ಮಾನ್ ಜಿ., ಪ್ರಮೋದ್ , ತಿಮ್ಮಪ್ಪ , ತಿರುಮಲೇಶ್ ಮ ತ್ತು ಗುತ್ತಿಗೆದಾರ ಯಶೋಧರ ಕೆ. ಜತೆಗಿದ್ದರು. ರಸ್ಥೆಗೆ ಸ್ಥಳ ನೀಡಿದ   ಡಾ. ವಿಠಲದಾಸ್ ಶೆಟ್ಟಿ ,ಗಂಗಾಧರ ರೈ, ಗಂಗಯ್ಯ ಪೂಜಾರಿ, ನಿರಂಜನ ಭಂಡಾರಿ, ಶಾಲಿನಿ ಶೆಟ್ಟಿ, ಜಯರಾಮ ಶೆಟ್ಟಿ ,ರೂಪವಾಣಿ ಶೆಟ್ಟಿ, ವಾಮನ ಪೂಜಾರಿ, ಶೀನ ಪೂಜಾರಿ, ರೋಹಿತ್ ಪೂಜಾರಿ, ರಾಮಚವಂದ್ರ ದೇವಾಡಿಗ ಪ್ರಭಾಕರ ಬೆಲ್ಚಡ, ದೇವಕಿ ಆರ್ ರೈ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *