ಬಂಟ್ವಾಳ : ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣದ ಉದ್ದೇಶಕ್ಕಾಗಿ ಈಗ ಇರುವ ತಾಲೂಕು ಕಛೇರಿ ಕಟ್ಟಡವನ್ನು ತೆರವುಗೊಳಿಸಬೇಕಾದ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ತಾಲೂಕು ಕಛೇರಿ ನಡೆಸಲು ಅಗತ್ಯವಿರುವ ಕಟ್ಟಡ ನಿರ್ಮಾಣ ಕಾಮಗಾರಿಗೆ ಕರ್ನಾಟಕ ಸರಕಾರದ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು .
KAR_4166 (1)
ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಧರ್ಮರಾಜ್ , ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್ , ತಹಶೀಲ್ದಾರ್ ಮಹಮ್ಮದ್ ಇಸಾಕ್ , ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ , ಬಂಟ್ವಾಳ ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ , ಉಪತಹಶೀಲ್ದಾರ್ ರೋಹಿನಾಥ್ ಹಾಗೂ ಪರಮೇಶ್ವರ ಮೊಯಿಲಿ , ಕಂದಾಯಅಧಿಕಾರಿ ನಾರಾಯಣ ಪೂಜಾರಿ ,ಇಂಜಿನಿಯರ್ ಪ್ರೀತಂ ಹಾಗೂ ಅರುಣ್ ಪ್ರಕಾಶ್ ಡಿಸೋಜ , ಮಾಜಿ ತಾ.ಪಂ.ಅಧ್ಯಕ್ಷ ಪದ್ಮನಾಭ ರೈ , ಗುತ್ತಿಗೆದಾರ ಆಸಿಫ್ ಮಂಗಳೂರು ಮತ್ತಿತರರು ಉಪಸ್ಥಿತರಿದ್ದರು .

By suddi9

Leave a Reply

Your email address will not be published. Required fields are marked *