ಬಂಟ್ವಾಳ:ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಒಟ್ಟು 20.73 ಕಿ.ಮೀ ರಸ್ತೆ ಅಭಿವೃದ್ಧಿಗೆ ಒಟ್ಟು ರೂ 19.41 ಕೋಟಿ ಮೊತ್ತದ ಅನುದಾನ ಮಂಜೂರಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಈಗಾಗಲೇ ಒಟ್ಟು 9 ರಸ್ತೆಗಳಿಗೆ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ತಕ್ಷಣವೇ ಕಾಮಗಾರಿ ಪ್ರಾರಂಭವಾಗಲಿದೆ. ಬಂಟ್ವಾಳ ತಾಲ್ಲೂಕಿನ ಮಾವಿನಕಟ್ಟೆ – ಕೊನರೊಟ್ಟು – ಪೆರ್ಗಡ್ದೊಟ್ಟು – ಸಂಗಬೆಟ್ಟು ರಸ್ತೆ ಅಭಿವೃದ್ಧಿಗೆ ರೂ.216.87 ಲಕ್ಷ, ನಲ್ಕೆಮಾರು – ತಡ್ಯಾಲಗುಡ್ಡೆ – ಬಾಂಬಿಲ ರಸ್ತೆ ಅಭಿವೃದ್ಧಿಗೆ ರೂ.189.88 ಲಕ್ಷ, ಮೋಂತಿಮಾರು – ಮಂಚಿ ರಸ್ತೆ ಅಭಿವೃದ್ಧಿಗೆ ರೂ.248.05 ಲಕ್ಷ, ಸಾಣೂರುಪದವು – ಕೊಳತ್ತಮಜಲು ರಸ್ತೆ ಅಭಿವೃದ್ಧಿಗೆ ರೂ.216.70 ಲಕ್ಷ, ಬಡಕಬೈಲ್ – ಕಲಾಯಿ ರಸ್ತೆೆ ಅಭಿವೃದ್ಧಿಗೆ ರೂ.264.40 ಲಕ್ಷ, ಹೆಗ್ಗಣಗುಳಿ – ಕಕ್ಯಪದವು ರಸ್ತೆ ಅಭಿವೃದ್ಧಿಗೆ ರೂ.120.62 ಲಕ್ಷ, ಶುಂಠಿಹಿತ್ಲು – ಕಂಡದಬೆಟ್ಟು – ಕಲ್ಲೇರಿ ರಸ್ತೆ ಅಭಿವೃದ್ಧಿಗೆ ರೂ.218.23 ಲಕ್ಷ, ಕಣಿಯೂರು – ಒಡಿಯೂರು ರಸ್ತೆ ಅಭಿವೃದ್ಧಿಗೆ ರೂ. 265.11 ಲಕ್ಷ, ನೆಲ್ಲಿಗುಡ್ಡೆ – ಕೊಂಬೇಲು ರಸ್ತೆ ಅಭಿವೃದ್ಧಿಗೆ ರೂ.200.68 ಲಕ್ಷ ಮಂಜೂರಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
