ಬಂಟ್ವಾಳ: ಹರಿಯುವ ತೋಡುಗಳಿಗೆ ಕಿಂಡಿ ಅಣೆಕಟ್ಟ ನಿರ್ಮಿಸುವುದರಿಂದ ಕೃಷಿಗೆ ನೀರಾವರಿ ಸೌಲಭ್ಯ ಲಭಿಸುವುದಲ್ಲದೆ ಅಂತರ್ಜಲ ವೃದ್ಧಿಗೂ ನೆರವಾಗಲಿದೆ ಎಂದು ಕರ್ನಾಟಕ ಸರಕಾರದ ಅರಣ್ಯ ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಅವರು ಸಜೀಪಮುನ್ನೂರು ಗ್ರಾಮದ ಶಂಕರಲಚ್ಚಿಲ್ ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ರೂ.50.00 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಕಿಂಡಿ ಅಣೆಕಟ್ಟ ಕಾಮಗಾರಿಗೆ ಶಿಲಾನ್ಯಾಸ ನೇರವೇರಿಸಿ ಮಾತನಾಡುತ್ತಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಮಮತಾ ಡಿ.ಎಸ್.ಗಟ್ಟಿ, ತಾಲೂಕು ಪಂಚಾಯತ್ ಸದಸ್ಯ ಶರೀಫ್ ಆಲಾಡಿ, ಪಂಚಾಯತ್ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ಶರೀಫ್ ನಂದಾವರ ಆರಾಧನ ಸಮಿತಿ ಸದಸ್ಯ ಯೂಸೂಫ್ ಕರಂದಾಡಿ, ಪ್ರಮುಖರಾದ ಅಬ್ಬಾಸ್ ಆಲಿ, ಎ.ಸಿ.ಭಂಡಾರಿ ಬಿ.ಹೆಚ್.ಖಾದರ್, ಪರಮೇಶ್ವರ.ಎಂ, ಮನೋಜ್ ಆಳ್ವ, ಕಿರಣ್ ಆಲಾಡಿ, ಪ್ರಭಾಕರ್ ರೈ, ವಾಮನ ಪೂಜಾರಿ, ಸುಬ್ರಹ್ಮಣ್ಯ ಭಟ್, ಸಹಾಯಕ ಅಭಿಯಂತರ ಶಿವಪ್ರಸನ್ನ ಮೊದಲಾದವರು ಉಪಸ್ಥಿತರಿದ್ದರು.

