ಸುದ್ದಿ9 ಕೈಕಂಬ: ವಾಮಂಜೂರು ಅಮೃತೇಶ್ವರ ದೇವಳದ ಅಷ್ಟಬಂದ ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಸಭೆಯು ಮಾರ್ಚ್ 4ರಂದು ಬುಧವಾರ ಅಮೃತೇಶ್ವರ ಸಭಾಂಗಣದಲ್ಲಿ ನಡೆಯಿತು.ಧಾರ್ಮಿಕ ಉಪನ್ಯಾಸವನ್ನುಮಾಹೆ ವಿಶ್ವವಿದ್ಯಾಲಯದ ನಿವ್ರತ ಪ್ರೊ .ಡಾ.ಕುಲಪತಿಯವರು ಉಪನ್ಯಾಸ ನೀಡಿದರು. ಪ್ರತಿ ಮನುಷ್ಯನು ನಾನು ಅಂದರೆ ಐ ಎನ್ನುವುದನ್ನು ಬಿಡಬೇಕು. ಐ
ಎಂದರೆ ಇಲ್ ನೆಸ್ ಹಾಗಾಗಿ ವಿ ಅಂದರೆ ನಾವು ಎಂದಾಗ ನಮ್ಮಲ್ಲಿ ವಿಲ್ ನೆಸ್ ಉಂಟಾಗುತ್ತದೆ. ಅದಷ್ಟು ನಮ್ಮ ಹಿರಿಯರ ಆಹಾರ ಪದ್ಧತಿಯನ್ನು ಅನುಸರಿಸಿ ರೂಢಿಸಿಕೊಂಡಾಗ ರೋಗದಿಂದ ಮುಕ್ತರಾಗಿ ದೀರ್ಘಾಯುಷ್ಯವನ್ನು ಪಡಕೊಳ್ಳಬಹುದು.
ಯಾವುದೇ ಆಧುನಿಕ ವ್ಯವಸ್ಥೆಗಳಿಲ್ಲದೆ ಸಾಧಾರಣಾ 800 ವರ್ಷಗಳ ಹಿಂದೆ ನಮ್ಮ ಹಿರಿಯರು ಈ ದೇವಸ್ಥಾನವನ್ನು ನಿರ್ಮಿಸಿ ನಮ್ಗೆಲ್ಲಾ ಮಾದರಿಯಾಗಿದ್ದಾರೆ. ಹಾಗಾಗಿ ಮನುಷ್ಯ ಈ ಭೂಮಿ ಹುಟ್ಟಿರುವುದೇ ಸಾತ್ಕಾರ್ಯಕ್ಕಾಗಿ ಆದುದರಿಂದ ಪ್ರತಿಯೊಬ್ಬರು ಪ್ರತಿಯೊಬ್ಬರನ್ನು ಪ್ರೀತಿಸಿ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಬೇಕೆಂದು ನುಡಿದರು..
ಸುಬ್ರಹ್ಮಣ್ಯ ಮಠದ ಸ್ವಾಮಿ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ವಿಶ್ವ ಹಿಂದು ಪರಿಷತ್ ಕಾರ್ಯಧ್ಯಕ್ಷ ಎಂ.ಬಿ. ಪುರಾಣಿಕ್ ವಹಿಸಿದ್ದರು .
ಮುಖ್ಯ ಅತಿಥಿಗಳಾಗಿ ಕುಡುಪು ವಾಸ್ತು ಶಿಲ್ಪ ತಜ್ಙ ಕೃಷ್ಣರಾಜ ತಂತ್ರಿ, ಶ್ರೀ ಕ್ಷೇತ್ರ ಕಟೀಲು ಅನುವಂಶಿಕ ಅರ್ಚಕ ಅನಂತ ಅಸ್ರಣ್ಣ, ಮಾಯಿಪ್ಪಾಡಿ ಅರಮನೆ ರಾಜೇಂದ್ರ ರಾವ್, ಜೀರ್ಣೋಧಾರ ಸಮಿತಿ ಐ.ಎಫ್ಎಸ್ ಅಧ್ಯಕ್ಷ ತಾರನಾಥ ಆಳ್ವ, ತುಳು ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಉಮನಾಥ ಕೋಟ್ಯಾನ್, ಶ್ರೀ ದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ನೀಲಕಂಠ ಉಮಾಮಹೇಶ್ವರ ದೇವಸ್ಥಾನ, ಅದ್ಯಪಾಡಿ ಆಡಳಿತ ಮೊಕ್ತೇಸರ ಶೆಡ್ಡೆ ಮಂಜುನಾಥ ಭಂಡಾರಿ, ಮಂಗಳೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಲೋಕೇಶ್ ಆಚಾರ್ಯ, ಉದ್ಯಮಿ ಲಿಂಗಮಾರುಗುತ್ತು ಸುಬ್ಬಯ್ಯ ಶೆಟ್ಟಿ, ಧರ್ಮಸ್ಥಳ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಪ್ರಗತಿನಿಧಿ ನಿರ್ದೇಶಕ ಸಂಪತ್ ಕುಮಾರ್, ಮ.ನ.ಪಾ ಕಾರ್ಪೋರೇಟರ್ ಎಮ್.ಶಶಿಧರ ಹೆಗ್ಡೆ, ಮ.ನ.ಪಾ ಕಾರ್ಪೋರೇಟರ್ ಕೆ.ಬಾಸ್ಕರ್, ಮಾಜಿ ಎಂ.ಎಲ್.ಸಿ ಮೋನಪ್ಪ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.


