ಬೈಕ್ ಸವಾರನಿಗೆ ಗಾಯ
ಬಂಟ್ವಾಳ: ಕಾವಳಪಡೂರು ಗ್ರಾಮದ ಬಾಂಬಿಲ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಕಾರಿ ಬಸ್ ಹಾಗೂ ಬೈಕ್ ಢಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಮಂಗಳವಾರ ಸಂಭವಿಸಿದೆ.
images
ಬೈಕ್ ಸವಾರ ಕಾವಳಕಟ್ಟೆಯ ಮಹಾಬಲ ಶೆಟ್ಟಿ ಅವರ ಪುತ್ರ ರಾಕೇಶ್ ಶೆಟ್ಟಿ(30) ಗಾಯಾಳುವಾಗಿದ್ದು ಕಾಲಿನ ಮೂಳೆ ಮುರಿತಕ್ಕೊಳಗಾಗಿದ್ದಾರೆ.ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾವಳಕಟ್ಟೆಯಿಂದ ಬಂಟ್ವಾಳ ಕಡೆಗೆ ಅವರು ಬೈಕ್ನಲ್ಲಿ ಸಾಗುತ್ತಿದ್ದಾಗ ಬಾಂಬಿಲ ಮಸೀದಿ ಎದುರಿನ ತಿರುವಿನಲ್ಲಿ ಎದುರುಗಡೆಯಿಂದ ಸರಕಾರಿ ಬಸ್ ವಾಹನವೊಂದನ್ನು ಓವರ್‍ಟೇಕ್ ಮಾಡುವ ಭರದಲ್ಲಿ ಬೈಕ್ಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ರಾಕೇಶ್ ಅವರು ಬೈಕ್ ಸಹಿತ ದೂರಕ್ಕೆಸೆಯಲ್ಪಟ್ಟು ರಸ್ತೆ ಬದಿಯ ಮನೆಯಂಗಳವೊಂದಕ್ಕೆ ಬಿದ್ದಿದ್ದರು. ತತ್‍ಕ್ಷಣ ಸ್ಥಳೀಯರು ಆ್ಯಂಬುಲೆನ್ಸ್ ವೊಂದರಲ್ಲಿ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದರು. ಬಂಟ್ವಾಳ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *