ಬಂಟ್ವಾಳ : ಪ್ರಜ್ಞಾವಂತ ಸಮಾಜಕ್ಕೆ ಸಹಾಯ ಆಗುವಂತೆ ಕಾನೂನು ಮಾಹಿತಿ ನೀಡಬೇಕಾಗಿದೆ . ಜನ್ಮಪೂರ್ವದಿಂದ ಸಾವಿನ ನಂತರವೂ ಅನ್ವಯಿಸುವುದು ಕೇವಲ ಕಾನೂನು ಮಾತ್ರ . ಕಾನೂನಿನ ವಿವಿಧ ಬಾಹುಗಳು ಸಮಾಜದಲ್ಲೆಡೆ ಚಾಚಿರುವುದನ್ನು ಪಾಲಿಸಿದಾಗಲೇ ಅದಕ್ಕೆ ಗೌರವ ನೀಡಿದಂತೆ. ಉಚಿತ ಕಾನೂನು ಸಲಹೆ ನಿಜವಾಗಿಯೂ ಸಮರ್ಪಕವಾಗಿಯೂ ಕೆಲಸ ಮಾಡುತ್ತಿದೆ ಗೌ/ ಪ್ರಧಾನ ಸಿವಿಲ್ ನ್ಯಾಯಾಧೀಶ ಜಯಪ್ರಕಾಶ್ ಡಿ.ಆರ್ ನುಡಿದರು . ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ(ರಿ), ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ , ಬಂಟ್ವಾಳ ಕಂದಾಯ ಇಲಾಖೆ , ಸಾರ್ವಜನಿಕ ಶಿಕ್ಷಣ ಇಲಾಖೆ , ತಾಲೂಕು ಪಂಚಾಯತ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿವಿಧ ಗ್ರಾಮ ಪಂಚಾಯತ್‍ಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಯು. ಉದ್ಘಾಟಿಸಿದರು .
KAR_4012
ಗೌ/ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ , ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ , ಸಹಾಯಕ ಸರಕಾರಿ ಅಭಿಯೋಜಕಿ ಅರ್ಚನಾ ಪ್ರಸಾದ್ , ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಾನಂದ ಬಾಳಿಗಾ , ಲಯನೆಸ್ ಕ್ಲಬ್ ಅಧ್ಯಕ್ಷೆ ಶೋಭಾ ಮಾಧವ ಮಾರ್ಲ ಉಪಸ್ಥಿತರಿದ್ದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಲಯನ್ ಸುರೇಶ್ ಪೂಜಾರಿ ಸ್ವಾಗತಿಸಿದರು. ಲಯನ್ ಜಗ ದೀಶ್ ಎಡಪಡಿತ್ತಾಯ ವಂದಿಸಿ , ನ್ಯಾಯವಾದಿ ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು .

By Suddi9

Leave a Reply

Your email address will not be published. Required fields are marked *