ಮಂಗಳೂರು: ಭಾರತ ತನ್ನ ಗತಕಾಲದ ಗರಿಮೆಯನ್ನು ಎತ್ತಿ ಹಿಡಿಯಬೇಕು, ರಾಜಗುರು ಸ್ಥಾನದಲ್ಲಿದ್ದ ಭಾರತ ಮತ್ತೆ ಆ ಪದವಿಯನ್ನು ಸ್ವೀಕರಿಸಬೇಕು. ಇದಕ್ಕೆಲ್ಲಾ ಒಂದೇ ಪರಿಹಾರ ಭಾರತ ಹಿಂದೂ ರಾಷ್ಟ್ರವಾಗಬೇಕು. ಇಂದಿನಿಂದಲೇ ನಾವೆಲ್ಲಾ ಭಾರತ ಹಿಂದೂ ರಾಷ್ಟ್ರವನ್ನಾಗಿಸಲು ಪಣ ತೊಡೋಣ ಎಂದು ಸಾಧ್ವಿ ಬಾಲಿಕಾ ಸರಸ್ವತಿ ಜೀ ಹೇಳಿದ್ದಾರೆ.
ಅವರು ವಿಶ್ವಹಿಂದೂ ಪರಿಷತ್‍ನ ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ಬೃಹತ್ ಹಿಂದೂ ಸಮಾವೇಷವನ್ನು ಉದ್ದೇಶಿಸಿ ಮಾತಾಡುತ್ತಿದ್ದರು.

hindu1

 

hindu8

hindu13

hindu13

hindu3

hindu4

hindu6

hindu7

hindu8

hindu12

 

hindu3

hindu

sadvhi

vhp (1)

vhp (2)

vhp (3)

vhp (4)

vhp (5)

vhp (6)

vhp (7)

vhp (8)

ಸುಮಾರು ಅರ್ಧಗಂಟೆಗಳ ಕಾಲ ನಿರರ್ಗಳವಾಗಿ ಮಾತಾಡಿದ ಸಾಧ್ವಿ ತನ್ನ ಭಾಷಣದ ವೇಳೆಯಲ್ಲಿ  ಎಲ್ಲೂ ಎಡವಲಿಲ್ಲ. ತನ್ನ ಅನಿಸಿಕೆಗಳನ್ನು ಯಾವ ಮುಲಾಜೂ ಇಲ್ಲದೆ ಧೈರ್ಯವಾಗಿ ಹೇಳಿದ 18 ವರ್ಷದ ಸಾರ್ಧವಿ ಸದ್ಯ ಹಿಂದೂ ಸಮಾಜ ಎದುರಿಸುತ್ತಿರುವ ಸಮಸ್ಯೆ, ಮತಾಂಧ ಶಕ್ತಿಗಳಿಂದ ಹಿಂದೂ ಸಮಾಜಕ್ಕೆ ಆಗುತ್ತಿರುವ ಹಾನಿ ಮುಂತಾದುವುಗಳ ಬಗ್ಗೆ ಬೆಳಕು ಚೆಲ್ಲಿದರು. ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಮುಂತಾದುವಗಳ ಬಗ್ಗೆ ಮಾತಾಡನಾಡಿದರು.

ಭಾರತ ಹಿಂದೂ ರಾಷ್ಟ್ರ ಆಗುವುದಕ್ಕೆ ಜಾಸ್ತಿ ದಿನ ಕಾಯುವುದು ಬೇಡ, ಇಂದಿನಿಂದಲೇ ಅದಕ್ಕಾಗಿ ಪಣ ತೊಡೋಣ ಎಂದು ಹೇಳೀದ್ದಾರೆ. ಘರ್ ವಾಪಾಸಿಯನ್ನು ಸಮರ್ಥಿಸಿದ ಸಾಧ್ವಿ ಕ್ರೈಸ್ತರು ಹಾಗೂ ಮುಸ್ಲಿಮರು ಆಮಿಷವೊಡ್ಡಿ ಮತಾಂತರ ಮಾಡುವುದು ತಪ್ಪಾಗುವುದಿಲ್ಲ ಆದರೆ, ಮತಾಂತರ ಹೊಂದಿದ ಹಿಂದೂಗಳನ್ನು ಮರುಮತಾಂತರ ಹೊಂದಿದರೆ ಅದು ತಪ್ಪಾಗುತ್ತದೆ. ಒಂದು ಮಗು ಮನೆಯನ್ನು ಬಿಟ್ಟು ಹೋದರೆ ಆ ಮಗು ಮತ್ತೆ ಮನೆಯನ್ನೇ ಸೇರಬೇಕು. ಅದು ಬಿಟ್ಟು ಬೇರೆ ಎಲ್ಲಿಗೆ ಹೋಗಲು ಸಾಧ್ಯ. ಆದ್ದರಿಂದ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಘರ್ ವಾಪಾಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ ಎಂದು ಸಾಧ್ವಿ ಹೇಳಿದ್ದಾರೆ.

ಪಾಕಿಸ್ತಾನದ ದಾಳಿಯನ್ನು ಖಂಡಿಸಿದ ಸಾಧ್ವಿ ಭಾರತ ಕೈಕಟ್ಟಿ ಕೂತಿದ್ದು ಸಾಕು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕು ನಮ್ಮ ಮುಂದೆ ಹಲವಾರು ಪೊಲೀಸರಿದ್ದಾರೆ. ಸೈನಿಕಿದ್ದಾರೆ. ಅವರನ್ನು ನಾವು ಕಳೆದುಕೊಂಡಿದ್ದು ಸಾಕು. ಅದಕ್ಕಾಗಿ ಪಾಕ್‍ಗೆ ತಕ್ಕ ಉತ್ತರ ನೀಡುವು ಅಗತ್ಯವಿದೆ ಎಂದು ಹೇಳಿದರು.

ಪ್ರಾರ್ಥನೆಯಿಂದ ಭಾಷಣ ಆರಂಭಿಸಿದ ಸಾಧ್ವಿ ಮೊದಲು ಕನ್ನಡದಲ್ಲೇ ಎಲರಿಗೂ ನಮಸ್ಕಾರ ಅರ್ಪಿಸಿದರು. ರಾಮಾಯಣದ ಕಥೆಗಳನ್ನು ದೃಷ್ಟಾಂತ ರೂಪದಲ್ಲಿ ಹೇಳಿದರು. ಕಾಡು ಪ್ರದೇಶದ ಜನರನ್ನು ಯಾವ ರೀತಿ ಕ್ರೈಸ್ತ ಮಿಶನರಿಗಳು ಕಾಸ್  ಕೊಟ್ಟು ಮತಾಂತರ ಮಾಡುತ್ತಾರೋ ಅವರನ್ನು ಮತ್ತೆ ಹಿಂದೂ ಧರ್ಮಕ್ಕೆ ವಾಪಾಸ್ ತರಬೇಕು ಎಂದು ಹೇಳಿದ್ದಾರೆ.

.ಗೋರಕ್ಷಣೆ ನಮ್ಮ ಕರ್ತವ್ಯ:

ಗೋರಕ್ಷಣೆಯ ಬಗ್ಗೆ ಮಾತಾಡಿದ ಸಾಧ್ವಿಯವರು ಗೋವನ್ನು ತಾಯಿಗೆ ಹೋಲಿಸಿದರು. ಗೋವಿನಿಂದ ಸಕಲ ಸಂಪತ್ತು ಸಿಗುತ್ತದೆ, ಆದರೆ ಅದನ್ನು ವಧಿಸಲಾಗುತ್ತಿದೆ. ನಮ್ಮ ತಾಯನ್ನು ನಮ್ಮ ಕಣ್ಣ ಮುಂದೆಯೇ ವಧಿಸುವುದನ್ನು ನೋಡುತ್ತೇವೆ . ಇದರಿಂದ ಸರಕಾರಕ್ಕೆ ಹಣವೂ ಸಿಗುತ್ತದೆ. ಹಣ ಸಿಗುತ್ತದೆ ಎಂದು ನಾವು ತಮ್ಮ ತಾಯಿಯನ್ನೇ ಬಲಿ ಕೊಡುತ್ತಿದ್ದೇವೆ. ಮುಂದೆ ಇದಕ್ಕೆ ಅವಕಾಶ ನೀಡಬಾರದು. ಎಲ್ಲರೂ ಗೋರಕ್ಷಣೆ ಮಾಡಬೇಕೆಂದು ಪ್ರತಿಜ್ಞಾ ವಿಧಿ ಬೋಧಿಸಿದ್ಸಾರೆ.

ಹಿಂದೂ ಧರ್ಮಕ್ಕೆ ಮತಾಂತರಗೊಂಡ ಹಿಂದೂಗಳಿಗೆ ಸಮಾನ ಸ್ಥಾನ
ಘರ್ ವಾಪಾಸಿಯನ್ನು ಕಾನೂನಿಗೆ ವಿರುದ್ಧವೆಂದು ಎಲ್ಲರೂ ನಿಲ್ಲಿಸಲು ನೋಡುತ್ತಿದ್ದಾರೆ. ಆದರೆ ಆಮಿಷದಿಂದ ಮತಾಂತರ ಹೊಂದುವುದು ಅವರಿಗೆ ಕಾನೂನಿನ ಸಮ್ಮತಿ ಇದೆ. ಮರು ಮತಾಂತರ ಗೊಂಡ ಹಿಂದೂಗಳಿಗೆ  ಯಾವ ಸ್ಥಾನ ಎಂದು ಕೇಳುತ್ತಾರೆ, ಆದರೆ ಅವರಿಗೆ ಸಮಾನ ಸ್ಥಾನ ನೀಡುತ್ತೇವೆ. ಮನಷ್ಯನ ಜಾತಿ ಜನ್ಮತಹಾ ಮೂಡಿಬಂದಿದ್ದಲ್ಲ, ಅದು ಗುಣ ಧರ್ಮದಿಂದ ಬಂದಿದ್ದು. ಆದ್ದರಿಂದ ಹಿಂದೂ ಧರ್ಮದಲ್ಲಿ ಅಸಮಾನತೆ ಇಲ್ಲ.ಎಂದು ಹೇಳಿದ್ದಾರೆ. ಕೆಲವರು ಭಗವದ್ಗೀತೆಯನ್ನು ಸುಡಬೇಕು ಎಂದು ಹೇಳುತ್ತಿದ್ದಾರೆ ಅವರಿಗೆ ಕುರಾನ್, ಬೈಬಲ್ ಬಗ್ಗೆ ಮಾತನಾಡಲು ಧೈರ್ಯವಿಲ್ಲ. ಭಗವದ್ಗೀತೆಯನ್ನು ಸುಡಲು ಹೇಳಿದವರ ಅಜ್ಞಾನವನ್ನು ನಾವು ಸುಡಬೇಕು ಎಂದು ಪೇಜಾವರ ಹೇಳಿದ್ದಾರೆ.
ಹಿಂದೂ ಯುವಕರು ಕೋಮುಭಾವನೆಯನ್ನು ಬಿಟ್ಟು ಪ್ರೇಮಭಾವನೆಯನ್ನು ಬೆಳೆಸಬೇಕು, ಚರ್ಚ್, ಮಸೀದಿಗಳಿಗೆ ಕಲ್ಲು ತೂರುವ ಪುಂಡಾಟ ನಡೆಸುವುದು ಬೇಡ. ಎಂದು ಕಿವಿ ಮಾತು ಹೇಳಿದ್ದಾರೆ.
ಸಭೆಯಲ್ಲಿ ವೀರೇಂದ್ರ ಹೆಗ್ಡೆ, ಸಮಾಜೋತ್ಸವದ ಸಂಘಟಕ ವಿಜಯನಾಥ ವಿಠಲ ಶೆಟ್ಟಿ, ಮಾತನಾಡಿದರು. ಕ್ಯಾ. ಗಣೇಶ್ ಕಾರ್ಣಿಕ ಪ್ರಾಸ್ತಾವನೆಗೈದರು. ವೇದಿಕೆಯಲ್ಲಿ ಹಲವಾರು ಸಂತರ ಉಪಸ್ಥಿತರಿದ್ದರು. ಹಿಂದೂ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.
ಮೋದಿ ದಾಖಲೆ ಮುರಿದ ಸಾಧ್ವಿ:
ಕಳೆದ ಬಾರಿ ಮೋದಿ ಮಂಗಳೂರಿನ ಸಮಾವೇಷ ನಡೆಸಿದ್ದ ಜನಸಂಖ್ಯೆಗಿಂತ ಜಾಸ್ತಿ ಜನರನ್ನು ಹೊಂದಿದ್ದು, ಮೋದಿಯವರ ದಾಖಲೆಯನ್ನು ಸಾಧ್ವಿ ಮುರಿದಿದ್ದಾರೆ. ಮೋದಿ ಸಮಾವೇಶದಲ್ಲಿ ಇದ್ದದಕ್ಕಿಂತ ಒಂದು ಪಟ್ಟು ಜಾಸ್ತಿ ಜನರು ಮಂಗಳೂರಿನಲ್ಲಿ ಕಂಡುಬಂದರು.
ಜ್ಯೋತಿ ವೃತ್ತದಿಂದ ಹೊರ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಸಮಾಜೋತ್ಸವ ಶಾಂತಿಯುತವಾಗಿ ನಡೆದಿದ್ದು, ಯಾವುದೇ ಅನಾಹುತ ಸಂಭವಿಸಲಿಲ್ಲ. ಅಲ್ಲಲ್ಲಿ ಸಿಸಿ ಕೆಮಾರಗಳನ್ನು ಅಳವಡಿಸಲಾಗಿತ್ತು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು.

hindu2

By suddi9

Leave a Reply

Your email address will not be published. Required fields are marked *