ಮಂಗಳೂರು: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಲೋಕಸಭೆಯಲ್ಲಿ ಮಂಡಿಸಿದ 2015-16ನೇ ಸಾಲಿನ ಬಜೆಟ್ ಶ್ರೇಷ್ಠ ಭಾರತದ ಪರ ಇರುವ ಬಜೆಟ್. ಬಡವರ, ಕೃಷಿಕರ, ಯುವಕರ , ಮಹಿಳೆಯರ ಪರ ಚಿಂತನೆಯ ಹಾಗೂ `ಮೇಕ್ ಇಂಡಿಯಾ’ಕ್ಕೆ ಪುಷ್ಟಿ ನೀಡುವ ಬಜೆಟ್ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.

images
ಸುಕನ್ಯಾ ಸಮೃದ್ಧಿ, ನಿರ್ಭಯ ನಿಗೆ ದುಪ್ಪಟ್ಟು ಹಣ ನೀಡಿಕೆ ಮೂಲಕ ಹೆಣ್ಣುಮಕ್ಕಳ ರಕ್ಷಣೆಗೆ ವಿಶೇಷ ಕಾಳಜಿ, ಕೃಷಿಕ್ಷೇತ್ರಕ್ಕೆ ಹೆಚ್ಚಿನ ಹೂಡಿಕೆ, ರೈತರಿಗೆ ಬೇಕಾದ ವಿದ್ಯುತ್, ಅವರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ರೈತರ ವಿಮಾ ಮೊತ್ತದ ಹೆಚ್ಚಳ, ವೈಯಕ್ತಿಕ ತೆರಿಗೆದಾರರಿಗೆ ವಿನಾಯಿತಿಗಳು, ಕೈಗಾರಿಕೆ , ಮೂಲಸೌಕರ್ಯಗಳ ವೃದ್ಧಿಗೆ ಆದ್ಯ ಗಮನ, ಶಿಕ್ಷಣಕ್ಕಾಗಿ ಹೆಚ್ಚಿನ ನಿಧಿ, ರಕ್ಷಣೆಗೆ ಒತ್ತು ಸೇರಿದಂತೆ ಎಲ್ಲ ನಿಟ್ಟಿನಲ್ಲೂ ಭಾರತದ ಭವಿಷ್ಯವನ್ನು ಉಜ್ವಲಗೊಳಿಸುವ ಬಜೆಟ್ ಇದಾಗಿದೆ ಎಂದು ಅವರು ಅಭಿನಂದಿಸಿದ್ದಾರೆ.

By suddi9

Leave a Reply

Your email address will not be published. Required fields are marked *