ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ಮಡಿವಾಳಪಡ್ಪು ಎಂಬಲ್ಲಿ ಪುರಾತನ ಹಿನ್ನೆಲೆ ಹೊಂದಿರುವ ಕಾರಣಿಕ ಪ್ರಸಿದ್ಧ ನಾಲ್ಕೈತ್ತಾಯ ದೈವಸ್ಥಾನದಲ್ಲಿ ಮಾ.3ರಂದು ನಾಲ್ಕೈತ್ತಾಯ ದೈವದ ‘ಧರ್ಮ ಮೆಚ್ಚಿ ಮತ್ತು ಪರಿವಾರ ದೈವಗಳಿಗೆ ಧರ್ಮನೇಮೋತ್ಸವ’ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಸಚ್ಚಿದಾನಂದ ಖಂಡೇರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಿ.ಸಿ.ರೋಡ್ನಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೊಷ್ಠಿಯಲ್ಲಿ ಅವರು ಮಾತನಾಡಿ, ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಮತ್ತು ಕೋಟಿ ಮಾರ್ತ ಇವರ ಮಾರ್ಗದರ್ಶನದಲ್ಲಿ ನಡೆಯುವ ಧರ್ಮನೇಮೋತ್ಸಕ್ಕೆ ಮಾ.2ರಂದು ಮುದೆಲ್ಮುಟ್ಟಿ ಸ್ಥಾನದಿಂದ ದೈವದ ಭಂಡಾರ ಬರಲಿದೆ.
28btl-daivstan


ಬಂಟ್ವಾಳ ತಾಲ್ಲೂಕಿನ ಸಜಿಪಮಾಗಣೆಯಲ್ಲಿ ನಾಲ್ಕೈತ್ತಾಯ ದೈವದ ಆಕರ್ಷಕ ಮೊಗ (ಮುಖದ ಪ್ರತಿರೂಪ28btl-muga

ಮಾ.3ರಂದು ಬೆಳಿಗ್ಗೆ ಇಲ್ಲಿನ ನಾಗನಕಟ್ಟೆಯಲ್ಲಿ ನಾಗತಂಬಿಲ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ನಡೆಯುವ ಧಾಮರ್ಿಕ ಸಭೆಯಲ್ಲಿ ಮೂಡುಬಿದ್ರೆ ಕರಿಂಜೆ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಜಿ.ಪಂ.ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ ಮತ್ತಿತರ ಗಣ್ಯರು ಭಾಗವಹಿಸುವರು. ಇದೇ ವೇಳೆ ರಾಮಕೃಷ್ಣ ಕಾಟುಕುಕ್ಕೆ ಇವರಿಂದ ‘ದಾಸ ಸಂಕೀರ್ತನೆ’ ನಡೆಯಲಿದೆ.
ಅಂದು ರಾತ್ರಿ ನಾಲ್ಕೈತ್ತಾಯ ದೈವದ ‘ಧರ್ಮ ಮೆಚ್ಚಿ’ ಬಳಿಕ ಪರಿವಾರ ದೈವಗಳಾದ ಪಿಲ್ಚಂಡಿ, ಮಲರಾಯ ಜುಮಾದಿ ಮತ್ತಿತರ ದೈವಗಳಿಗೆ ‘ಧರ್ಮ ನೇಮೋತ್ಸವ’ ನಡೆಯಲಿದೆ ಎಮದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಪ್ರಮುಖರಾದ ಕೃಷ್ಣಪ್ಪ ಮಡಿವಾಳ, ಚಂದ್ರ, ಕೇಶವ ಕಂಡಿಗ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *