ಮೂಡುಬಿದಿರೆ: ಕ್ರೀಡಾ ವರದಿಗಾರರು ಪದವಿಯನ್ನು ಪಡೆದರೆ ಮಾತ್ರ ಸಾಲದು ಅವರಿಗೆ ಕ್ರೀಡೆಯ ಬಗ್ಗೆ ವೈಯಕ್ತಿಕ ಆಸಕ್ತಿ ಬೇಕು. ಪ್ರಸಿದ್ಧ ಕ್ರೀಡೆಗಳಿಗೆ ಪ್ರಾಮುಖ್ಯತೆಯನ್ನು ನೀಡಿದಂತೆ ಗ್ರಾಮೀಣ ಕ್ರೀಡೆಗಳಿಗೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ನಡೆಯುವ ಲೋಪಗಳ ಬಗ್ಗೆ ತನಿಖಾ ವರದಿಗಳಿಗೆ ಆದ್ಯತೆಯನ್ನು ನೀಡಿದಾಗ ಕ್ರೀಡಾ ಕ್ಷೇತ್ರವನ್ನು ಉತ್ತಮ ಪಡಿಸಲು ಸಾಧ್ಯವಾಗುತ್ತದೆ ಎಂದು ಮಂಗಳೂರು ವಿ.ವಿ.ಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಜಿ.ಪಿ.ಶಿವರಾಮ್
ಹೇಳಿದರು.

ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳು ಆಶ್ರಯದಲ್ಲಿ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಕ್ರೀಡಾ ಪತ್ರಿಕೋದ್ಯಮದ ಕುರಿತು ರಾಜ್ಯ ಮಟ್ಟದ ವಿಚಾರಗೋಷ್ಠಿ ಹಾಗೂ ವಿದ್ಯಾರ್ಥಿಗಳಿಗಾಗಿ `ಮೀಡಿಯಾ ಬಝ್’ ಮಾಧ್ಯಮ ಉತ್ಸವ ಹಾಗೂ ಜಂಟಿಯಾಗಿ `ಕ್ರೀಡಾ ಪತ್ರಿಕೋದ್ಯಮ ತಂತ್ರಗಾರಿಕೆ ಹಾಗೂ ಸವಾಲುಗಳು’ ಕುರಿತ ವಿಚಾರ ಸಂಕಿರಣ ಗೋಷ್ಠಿಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
26 mood media buzz

26 mood media buzz1

ಟಿ.ವಿ ಮಾಧ್ಯಮದಲ್ಲಿ ನೇರ ಪ್ರಸಾರದ ಮೂಲಕ ಕ್ರೀಡೆಗಳನ್ನು ವೀಕ್ಷಿಸಬಹುದು. ಕ್ರೀಡಾ ವರದಿಗಾರರ ವಿಶ್ಲೇಷಕಾತ್ಮಕ ಕ್ರೀಡಾ ವರದಿಗಳೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ ಎಂದ ಅವರು ಮಾಧ್ಯಮಗಳಿಂದ ಬರುವ ಉಪಯುಕ್ತ ವರದಿಗಳ ಮೂಲಕ ಕ್ರೀಡಾ ಇಲಾಖೆ ಹಾಗೂ ಸಂಬಂಧಪಟ್ಟ ಸಂಸ್ಥೆಗಳು ಅಪ್ಡೇಟ್ ಆಗುತ್ತಿರಬೇಕೆಂದು ಹೇಳಿದರು.

ಮಂಗಳೂರು ವಿ.ವಿ.ಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ ದಿಕ್ಸೂಚಿ ಭಾಷಣ ಮಾಡಿ
ಸೃಜನಶೀಲತೆಯೊಂದಿಗೆ ಹಿತವಾಗುವ ಕ್ರೀಡಾ ವರದಿಗಳು ಓದುಗರನ್ನು, ವೀಕ್ಷಕರನ್ನು ಗಮನಸೆಳೆಯುತ್ತದೆ ಮಾತ್ರವಲ್ಲ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸುತ್ತದೆ.ಮಾಧ್ಯಮ ಹಾಗೂ ಕ್ರೀಡಾ ಕ್ಷೇತ್ರ ಅವಿನಾವಭಾವ ಸಂಬಂಧ ಹೊಂದಿದ್ದು, ಸಾಧಕ ಕ್ರೀಡಾಪಟುಗಳನ್ನು ಲೋಕಕ್ಕೆ ಪರಿಚಯಿಸಿದೆ ಆದರೆ ಕೆಲವೊಮ್ಮೆ ಕ್ರೀಡಾ ವ್ಯವಸ್ಥೆಯನ್ನು ಹಾಳು ಮಾಡುವ ಪೂವರ್ಾಗ್ರಹಪೀಡಿತ ವರದಿ ಮಾಡುವುದರಿಂದ ಮಾಧ್ಯಮಗಳು ದೂರವಿದ್ದರೆ ಎರಡೂ ಕ್ಷೇತ್ರಗಳು ಸುಸ್ಥಿತಿಯಲ್ಲಿರುತ್ತದೆ ಎಂದರು.

ಸಮಾಜಮುಖಿ ವರದಿಗಳು ಸಕರ್ಾರದ ಕ್ರೀಡಾ ಇಲಾಖೆಯನ್ನು ಚರುಕುಗೊಳಿಸುತ್ತದೆ. ಆರೋಗ್ಯಕರ ಟೀಕೆ, ವಿಮರ್ಶೆ  ಕ್ರೀಡಾ ಕ್ಷೇತ್ರಕ್ಕೆ ಅವಶ್ಯಕ. ಮಹಿಳಾ ಕ್ರೀಡಾಪಟುಗಳಿಗೆ ಹೆಚ್ಚಿನ ಮಹತ್ವ ನೀಡುವುದು ಅಗತ್ಯ. ಕೆಲವೊಂದು ಸಂಶೋಧನಾತ್ಮಕ ವರದಿಗಳಿಂದ ಕ್ರೀಡಾಭಿವೃದ್ಧಿ ಸಾಧ್ಯ ಎಂದರು.

ಆಳ್ವಾಸ್ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡೆಗಳು ಕ್ರೀಡಾ ಮನೋಭಾವಕ್ಕಾಗಿ, ಕ್ರೀಡಾ ಪದಕ್ಕಾಗಿ ಮತ್ತು ಉತ್ತಮ ಆರೋಗ್ಯಕ್ಕಾಗಿ ನಡೆಯಬೇಕು ಇವುಗಳ ಬಗ್ಗೆ ಮಾಧ್ಯಮಗಳು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು. ಜಾಗತಿಕ ಮಟ್ಟದಲ್ಲಿ ನಡೆಯುವ ಕ್ರೀಡೆ ಮತ್ತು ಕ್ರೀಡಾಪಡುಗಳಿಗೆ ಮಾಧ್ಯಮಗಳು ಪ್ರಚಾರ ನೀಡುವಂತೆ ಗ್ರಾಮೀಣ ಪ್ರದೇಶದ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ನ್ಯಾಯ ನೀಡುತ್ತಿಲ್ಲ. ಕೇರಳ ಹಾಗೂ ಇತರ ರಾಜ್ಯಗಳ ಮಾಧ್ಯಮಗಳು ಕ್ರೀಡೆಗೆ ಆದ್ಯತೆ ನೀಡಿದಂತೆ ತಮ್ಮ ರಾಜ್ಯದಲ್ಲಿ ಸಿಗುತ್ತಿಲ್ಲವೆಂದು ವಿಷಾಧ ವ್ಯಕ್ತ ಪಡಿಸಿದರು.

ಕ್ರೀಡೆಗಳು ಪಾರದರ್ಶಕವಾಗಿ ನಡೆಯಬೇಕು ಹಾಗೂ ಕೆಳಮಟ್ಟದಿಂದಲೇ ವಿವಿಧ ಹಂತದಲ್ಲಿ ತಪಾಸಣೆಗಳು ನಡೆಯುತ್ತಿರಬೇಕು ಎಂದು ಹೇಳಿದ ಆಳ್ವರು ಮಾಧ್ಯಮಗಳು ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರ ವಹಿಸಬೇಕು ಮತ್ತು ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳನ್ನು ರಾಷ್ಟ್ರ-ಅಂತರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಹ ವರದಿಗಳು ಮೂಡಿ ಬರಬೇಕು ಇವುಗಳ ಬಗ್ಗೆ ಯುವ ಪತ್ರಕರ್ತರು ಗಮನ ಹರಿಸಬೇಕೆಂದು ಹೇಳಿದರು. ಆಳ್ವಾಸ್ ಕಾಲೇಜಿನ

By suddi9

Leave a Reply

Your email address will not be published. Required fields are marked *