ಹಲ್ಲೆಗೊಳಗಾಗಿದ್ದ ರಿಯಾಝ್

ಸುರತ್ಕಲ್: ತೊಡೆಯಲ್ಲಿ ಪವಡಿಸಿ ಸಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಫೋಟೋ ಪ್ರಕರಣಕ್ಕೆ ಸಂಬಂಧಿಸಿ ರಿಯಾಝ್‍ಗೆ ಹಲ್ಲೆ ನಡೆಸಿದ ಇಬ್ಬರನ್ನು ಹಾಗೂ ಮಸೀದಿಗೆ ಕಲ್ಲೆಸೆದ ಆರೋಪಕ್ಕೆ ತುತ್ತಾದ ಮೂವರನ್ನು ಬಂಧಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.

ತೊಡೆಯಲ್ಲಿ ಪವಡಿಸಿರುವ ದೃಶ್ಯ
ತೊಡೆಯಲ್ಲಿ ಪವಡಿಸಿರುವ ದೃಶ್ಯ
ಹಲ್ಲೆಗೊಳಗಾಗಿದ್ದ ರಿಯಾಝ್
ಹಲ್ಲೆಗೊಳಗಾಗಿದ್ದ ರಿಯಾಝ್

ಕೃಷ್ನಾಪುರ ನಿವಾಸಿ ಚಿತತರಂಜನ್, ಹಾಗೂ ಕಿನ್ನಿಗೋಳಿ ನಿವಾಸಿ ಗುರುಪ್ರಸಾದ್(23) ಎಂಬಿಬ್ಬರು ರಿಯಾಜ್‍ಗೆ ಹಲ್ಲೆ ನಡೆಸಿ ಬಂಧಿಸಲ್ಪಟ್ಟ ಅರೋಪಿಗಳು. ಅದೇ ರೀತಿ ಮಸೀದಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ ರಂಜಿತ್, ಅಭಿಜಿತ್ ಹಾಗೂ ಮತ್ತೋರ್ವನನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಹಿಂದೂ ಸಂಘಟನೆಯ ಮುಖಂಡರೇ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿದ್ದು, ಇದುವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿಲ್ಲ. ಆರೋಪಿಗಳಲ್ಲಿ ಒಬ್ಬ ಅಮಾಯಕ ಹಾಗೂ ಮತ್ತೋರ್ವ ಅಪ್ರಾಪ್ತ ಎಂದು ತಿಳಿದುಬಂದಿದೆ.

By suddi9

Leave a Reply

Your email address will not be published. Required fields are marked *